ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷದ ಒಪ್ಪಂದಕ್ಕೆ ಅಂಕಿತ ಹಾಕುವ ಕುರಿತು ಅನಿಶ್ಚಿತತೆ ತಲೆದೋರಿದೆ. ಇಂದು ಈ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕ
ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷದ ಒಪ್ಪಂದಕ್ಕೆ ಅಂಕಿತ ಹಾಕುವ ಕುರಿತು ಅನಿಶ್ಚಿತತೆ ತಲೆದೋರಿದೆ. ಇಂದು ಈ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಪ್ರಸ್ತಾಪವನ್ನು ಇರಾನ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಹೀಗಾಗಿ ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ವಿಚಾರದಲ್ಲಿ ಗೊಂದಲ ತಲೆದೋರಿದೆ.
ಕಳೆದ ೩ ತಿಂಗಳಿನಿಂದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಯುದ್ಧಾಂತ್ಯಕ್ಕೆ ಸಹಿ ಹಾಕಲು ಎರಡು ದೇಶಗಳು ಮುಂದಾಗಿವೆ ಎಂದು ಈ ಮೊದಲು ಟ್ರಂಪ್ ಹೇಳಿಕೆ ನೀಡಿದ್ದರು.
ಈ ಒಪ್ಪಂದಕ್ಕೆ ತೆರೆ ಬೀಳುತ್ತಿದ್ದಂತೆ ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ರಂಪ್ ಹೇಳಿದ್ದರು. ಈ ಸಂಬAಧ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿದ್ದರೂ ಇಂದು ಮುದ್ರೆ ಬೀಳುವುದು ಅನುಮಾನವಾಗಿದೆ. ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಶಿಯಲ್’ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ಈ ಒಪ್ಪಂದವು ಇರಾನ್ ಯಾವುದೇ ರೂಪದಲ್ಲಿ (ಖರೀದಿ, ಅಭಿವೃದ್ಧಿ ಅಥವಾ ಸಾಗಣೆ) ಅಣ್ವಸ್ತ್ರಗಳನ್ನು ಹೊಂದದಂತೆ ತಡೆಯಲು “ಅಣ್ವಸ್ತ್ರ ರಹಿತ ಭದ್ರತಾ ಗೋಡೆ”ಯಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.”
ಮಧ್ಯಪ್ರಾಚ್ಯದ ಸುದೀರ್ಘ ಭವಿಷ್ಯಕ್ಕಾಗಿ ನಾವು ಇರಾನ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಒಂದು ವೇಳೆ ಈ ರಾಜತಾಂತ್ರಿಕ ಪ್ರಕ್ರಿಯೆ ವಿಫಲವಾದರೆ, ನಮ್ಮ ಬಳಿ ‘ಅಂತಿಮ ಪರ್ಯಾಯ ಮಾರ್ಗ ಮಿಲಿಟರಿ ದಾಳಿಗೆ ಸಿದ್ಧವಿದೆ” ಎಂದು ಟ್ರಂಪ್ ಎಚ್ಚರಿಕೆಯನ್ನೂ ನೀಡಿದ್ದಾರೆ.


COMMENTS