‘ಬಿಗ್ ಬಾಸ್ ಕನ್ನಡ ಸೀಸನ್ 11’ ಇನ್ನೆರಡು ವಾರಗಳಲ್ಲಿ ಮುಗಿಯಲಿದೆ. ಅದಾದ ಬಳಿಕ ಬಿಗ್ ಬಾಸ್ ಸಮಯಕ್ಕೆ ಹೊಸ ರಿಲಿಯಾಲಿಟಿ ಶೋ ಪ್ರಸಾರ ಆಗಲಿದೆ. ಅದರ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಮಾಹಿತಿ ಹಂಚಿಕೊಂಡಿದೆ. ಒಂದು ಹೊಸ ಥೀಮ್ ಇರುವ ‘ಬಾಯ್ಸ್ Vs ಗರ್ಲ್ಸ್’ ರಿಯಾಲಿಟಿ ಶೋನ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ.
ಕಲರ್ಸ್ ಕನ್ನಡ ಚಾನೆಲ್ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭವಾಗಿ 3 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಶೋ ಮುಕ್ತಾಯ ಆಗಲಿದೆ. ‘ಬಿಗ್ ಬಾಸ್’ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ಬಾಯ್ಸ್ Vs ಗರ್ಲ್ಸ್’ ಹೆಸರಿನ ಹೊಸ ರಿಯಾಲಿಟಿ ಶೋ ಪ್ರಸಾರ ಆಗಲಿದೆ. ‘ಬಿಗ್ ಬಾಸ್’ ಕಾರ್ಯಕ್ರಮದ ಶನಿವಾರದ (ಜನವರಿ 11) ಸಂಚಿಕೆಯಲ್ಲಿ ಈ ಶೋನ ಲೋಗೋ ಅನಾವರಣ ಮಾಡಲಾಗಿದೆ.
