ಇಂದಿರಾ ಲಂಕೇಶ್ ಇನ್ನಿಲ್ಲ

Homeಬ್ರೇಕಿಂಗ್ ನ್ಯೂಸ್

ಇಂದಿರಾ ಲಂಕೇಶ್ ಇನ್ನಿಲ್ಲ

ಬೆಂಗಳೂರು : ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾ

ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ನಾಡಗೌಡ
ಧಾರ್ಮಿಕ ಸ್ಥಳಗಳಿಗೆ ಸಚಿವ ಡಾ. ಎಂ.ಬಿ. ಪಾಟೀಲ ಭೇಟಿ
ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

ಬೆಂಗಳೂರು : ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.

ಇವರು ಖ್ಯಾತ ಪತ್ರಕರ್ತೆ ಮತ್ತು ಚಿಂತಕಿ ದಿವಂಗತ ಗೌರಿ ಲಂಕೇಶ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ತಾಯಿ.

ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿ :

ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ೨೦೦೦ ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬದ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದರು.

ಸ್ವಾವಲಂಬಿ ಬದುಕಿನ ದಿಟ್ಟ ಮಹಿಳೆ
ಯಾವುದೇ ಪೂರ್ವ ವ್ಯವಹಾರದ ಹಿನ್ನೆಲೆ ಇಲ್ಲದಿದ್ದರೂ, ಕೇವಲ ತಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿAದ ಯಶಸ್ವಿಯಾಗಿ ಸೀರೆ ಉದ್ಯಮವನ್ನು ನಡೆಸಿ, ಕುಟುಂಬಕ್ಕೆ ಆರ್ಥಿಕ ಶಕ್ತಿಯಾಗಿದ್ದ ಸ್ವಾವಲಂಬಿ ಮಹಿಳೆ ಇಂದಿರಾ ಲಂಕೇಶ್. ಪತಿಯ ಬರವಣಿಗೆಯ ಸ್ವಾತಂತ್ರ‍್ಯಕ್ಕೆ ಮತ್ತು ಮಕ್ಕಳ ಉನ್ನತ ಬೆಳವಣಿಗೆಗೆ ಇವರ ದಿಟ್ಟತನ ಹಾಗೂ ಸ್ವಾಭಿಮಾನದ ಬದುಕೇ ಪ್ರೇರಣೆಯಾಗಿತ್ತು.

ಇಂದಿರಾ ಲಂಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬದ ಮೂಲಗಳು ಶೀಘ್ರದಲ್ಲೇ ಪ್ರಕಟಿಸಲಿವೆ. ಅವರ ನಿಧನದಿಂದ ಲಂಕೇಶ್ ಕುಟುಂಬದ ಒಡನಾಡಿಗಳು ಮತ್ತು ಕನ್ನಡ ಸಾರಸ್ವತ ಲೋಕ ಶೋಕಸಾಗರದಲ್ಲಿ ಮುಳುಗಿದೆ.

 

COMMENTS

WORDPRESS: 0
DISQUS: