ವಿಜಯಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ : 11.23 ಕೋಟಿ ರೂ. ಮೌಲ್ಯದ ಹಣ ಜಪ್ತು

Homeಬ್ರೇಕಿಂಗ್ ನ್ಯೂಸ್

ವಿಜಯಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ : 11.23 ಕೋಟಿ ರೂ. ಮೌಲ್ಯದ ಹಣ ಜಪ್ತು

ವಿಜಯಪುರ : ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿಯಾಗಿ ಕಬ್ಬನ್ನು ನುರಿಸಿ ಬೋಗಸ್ ರಸೀದಿ ತಯಾರಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣವನ್ನು ಅತ್ಯಂ

ಸಂಘ ಪರಿವಾರ ಕೆಣಕಿದವರು ಉಳಿದಿಲ್ಲ… ಜಿಗಜಿಣಗಿ ಮಾತು ಸತ್ಯ ಎಂದ ಗಣಿಹಾರ
ಬಿಗ್ ಬಾಸ್ ಬಳಿಕ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ‘ಬಾಯ್ಸ್ Vs ಗರ್ಲ್ಸ್​’
ಆಸ್ಮಿತಾ ವುಮೆನ್ಸ್ ಸೈಕ್ಲಿಂಗ್ ಲೀಗ್‌ಗೆ ಸಂಸದ ಜಿಗಜಿಣಗಿ ಚಾಲನೆ
ವಿಜಯಪುರ : ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿಯಾಗಿ ಕಬ್ಬನ್ನು ನುರಿಸಿ ಬೋಗಸ್ ರಸೀದಿ ತಯಾರಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಬೇಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದು, ೧೧,೨೩,೦೭,೫೬೯ ಕೋಟಿ ರೂ. ಮೌಲ್ಯದ ಹಣವನ್ನು ಜಪ್ತು ಮಾಡಿಕೊಳ್ಳುವ ಮೂಲಕ ಮಹತ್ವದ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದು, ಸಹಕಾರಿ ವಲಯದ ಕಾರ್ಖಾನೆಯ ಕೋಟ್ಯಂತರ ರೂ. ಮೌಲ್ಯದ ಸ್ವೊತ್ತು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧೀತರಾಗಿರುವ ಆರೋಪಿಗಳನ್ನು ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿ, ಭೀರಪ್ಪ ಗಾಡದಾರ,  ಯಲ್ಲಪ್ಪ  ಗಾಡದರ, ಪ್ರಕಾಶ  ಸಿದ್ದಲಿಂಗ್ಗಡ್ಡಿ,  ಪರಮಾನಂದ ಗಡ್ಡಿ, ಮಹಾದೇವ ಸಿದ್ದಲಿಂಗ ಕಾಂಬಳೆ ಉರ್ಫ್ ಸಿಂಗೆ,  ಬಾಳಪ್ಪ  ಚೋಪಡೆ, ಪ್ರಭಾಖರ ಸಿಂಗೆ ಎಂದು ಗುರುತಿಸಲಾಗಿದೆ.
ಈ ಕುರಿತು ವಿವರಣೆ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷö್ಮಣ ನಿಂಬರಗಿ ಮಾತನಾಡಿ, ಕಳೆದ ಜೂನ್ ೧೨ ರಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಕಾರ್ಖಾನೆಯಲ್ಲಿ ಕೆಲವರಿಂದ ಮೋಸವಾಗುತ್ತಿರುವ ಬಗ್ಗೆ ದೂರು ನೀಡಿದ್ದರು, ನಂದಿ ಸಕ್ಕರೆ ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕೆಲಸ ಮಾಡುವ ಧರೆಪ್ಪ  ದುಂಡಪ್ಪ ನಾವಿ ಹಾಗೂ ಇನ್ನೀತರರು ಸೇರಿಕೊಂಡು ೨೦೨೦-೨೧ ನೇ ಸಾಲಿನಿಂದ ಸನ್೨೦೨೫-೨೬ ನೇ ಸಾಲಿನ ೦೬ ವರ್ಷಗಳ ನಡುವಿನ ಅವಧಿಯ ಕಬ್ಬು ನುರಿಸುವ ಹಂಗಾಮಿನಲ್ಲಿ ಬೇರೆ ಬೇರೆ ರೈತರ ಹೆಸರಿನಲ್ಲಿ ಒಟ್ಟು ೧,೭೯,೮೧,೭೨೫ ಮೆಟ್ರಿಕ್ ಟನ್ ಕಬ್ಬನ್ನು ಮೋಸದಿಂದ ತೂಕ ಮಾಡಿ ಬೋಗಸ್ ರಸೀದಿ ತಯಾರಿಸಿ  ತಮಗೆ ಬೇಕಾದ ಬೇರೆ-ಬೇರೆಯವರ ಹೆಸರಿಗೆ ಇರುವ ಬ್ಯಾಂಕ್ಖಾತೆಗಳಿಗೆ ಹಣ ವರ್ಗಾಯಿಸಿ, ಆ ಮುಖಾಂತರ ಹಣ ಪಡೆದು, ಹಣ ದುರುಪಯೋಗ ಪಡಿಸಿಕೊಂಡು, ಸಕ್ಕರೆ ಕಾರ್ಖಾನೆಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದರು, ಈ ದೂರನ್ನು ಆಧರಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಲಾಯಿತು ಎಂದು ತನಿಖೆಯ ಜಾಡನ್ನು ವಿವರಿಸಿದರು.
ಈ ಪ್ರಕರಣಕ್ಕೆ ನಿಯೋಜಿಸಲಾದ ವಿಶೇಷ ತನಿಖಾ ತಂಡ ವಿವರವಾದ ತನಿಖೆ ಕೈಕೊಂಡು ಕಾರ್ಖಾನೆಯ ತೂಕ ಮಾಪನ ಕೇಂದ್ರದ ದಾಖಲಾತಿಗಳನ್ನು ಪರಿ ಶೀಲಿಸಿ, ಅವುಗಳ ಆಧಾರದ ಮೇಲೆ ಆರೋಪಿತನಾದ ಧರೆಪ್ಪ ದುಂಡಪ್ಪ ನಾವಿ ವಿಚಾರಣೆಗೊಳಪಡಿಸಿದೆ, ಈ ಪ್ರಮುಖ ಆರೋಪಿ ಹಾಗೂ ಬಂಧಿತರಾಗಿರುವ ಆರೋಪಿಗಳು ಈ ಮೊದಲು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇರುವ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ವಂಚನೆ ಮಾಡಿ ಆ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಇದೇ ರೀತಿಯ ಕೃತ್ಯವನ್ನು ವಿಜಯಪುರ ಜಿಲ್ಲೆಯಲ್ಲಿ ಮಾಡಬೇಕೆಂಬ ಉದ್ದೇಶ ಹೊಂದಿದ್ದು, ಆ ಪ್ರಕಾರ ಭೀರಪ್ಪ ಗಡದಾರ ಈತನು ಕಾರ್ಖಾನೆಯಲ್ಲಿ ತೂಕ ಮಾಪನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಈ ಮೊದಲೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಲ್ಲಿನ ಸಿಬ್ಬಂದಿಗಳನ್ನು ತನ್ನ ವಿಶ್ವಾಸಕ್ಕೆ ತಗೆದುಕೊಂಡು ಭೋಗಸ್ ಟೋಕನ್ ಜನರೇಟ್ ಮಾಡಿಸಿದ್ದಾರೆ. ಕಾರ್ಖಾನೆಗೆ ಬರುವ ಕಬ್ಬಿನ ಟ್ರ‍್ಯಾಕ್ಟರ್‌ಗಳ ತೂಕಕ್ಕೆ ಭೋಗಸ್ ಸ್ಟಾಕ್‌ನೊಂದಿಗೆ ಸೇರಿಸಿ ತಮಗೆ ಬೇಕಾದ ಬೇರೆಯವರ ಬ್ಯಾಂಕ ಖಾತೆಗೆ ಹಣ ವರ್ಗಾವಣೆ ಮಾಡಿರುವ ವಿಷಯ  ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿಗೆ ಗೊತ್ತಾಗಿದ್ದು, ಆತನಿಗೂ ಸಹ ಹಣದಲ್ಲಿ ಪಾಲು ಕೊಡುವದಾಗಿ ಹೇಳಿದ್ದು, ಅದರಂತೆ ಆರೋಪಿ ಭೀರಪ್ಪ ಗಡದಾರ ಫ್ಯಾಕ್ಟರಿ ಕೆಲಸದಿಂದ ಬಿಡುಗಡೆ ಹೊಂದಿದ್ದು, ನಂತರ ಉಳಿದ ಆರೋಪಿತರು ಧರೆಪ್ಪ ಈತನಿಗೆ ಸಂಪರ್ಕ ಮಾಡಿ ಭೀರಪ್ಪ ಈತನು ನಮ್ಮ ಜೊತೆಗೆ ಹೊಂದಾಣಿಕೆಯಾಗಿ ಭೋಗಸ್ ಬಿಲ್ ತಯಾರಿಸುತ್ತಾ ಬಂದಿದ್ದು, ಆತನಿಗೆ ನಾವು ಪಾಲು ರೂಪದಲ್ಲಿ ಹಣ ನೀಡಿದ್ದೇವೆ, ಅದರಂತೆ ನಿನಗೂ ಸಹ ಇನ್ನೂ ಹೆಚ್ಚಿನ ಪಾಲು ನೀಡುವುದಾಗಿ ಹೇಳಿದ್ದು, ಈ ರೀತಿಯಾಗಿ  ಇನ್ನುಳಿದ ಆರೋಪಿತರ ಸಹಕಾರದೊಂದಿಗೆ ಸನ್ ೨೦೨೦-೨೧ ನೇ ಸಾಲಿನಿಂದ ಸನ್೨೦೨೫-೨೬ ನೇ ಸಾಲಿನ ೦೬ ವರ್ಷಗಳ ನಡುವಿನ ಅವಧಿಯ ಕಬ್ಬು ನುರಿಸುವ ಹಂಗಾಮಿನಲ್ಲಿ ಸುಮಾರು ೩೪೪೯೦.೬೯೯ ಮೆಟ್ರಿಕ್ ತೂಕವುಳ್ಳ ಒಟ್ಟು ೧೨,೩೩,೨೨,೭೯೩ ರೂ.ಗಳನ್ನು ತಮಗೆ ಬೇಕಾದ ಬೇರೆ-ಬೇರೆಯವರ ಹೆಸರಿಗೆ ಇರುವ ೯೧ ವಿವಿಧ ಹೆಸರಿನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ, ಆ ಮುಖಾಂತರ ಹಣ ಪಡೆದು, ಹಣ ದುರುಪಯೋಗ ಪಡಿಸಿಕೊಂಡು ಸಕ್ಕರೆ ಕಾರ್ಖಾನೆಗೆ ಮೋಸ ಮಾಡಿದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿತು ಎಂದು ಲಕ್ಷö್ಮಣ ನಿಂಬರಗಿ ವಿವರಿಸಿದರು.
ತನಿಖೆಯ ಕಾಲಕ್ಕೆ ಆರೋಪಿತನಾದ ಧರೆಪ್ಪ ತಂ. ದುಂಡಪ್ಪ ನಾವಿಯಿಂದ  ೨೧,೦೦,೦೦೦ ರೂ. ನಗದು,  ಆತನ ಬ್ಯಾಂಕ ಖಾತೆಯಿಂದ ೪,೮೦,೪೭,೯೮೧ ರೂ. ಹೀಗೆ ಒಟ್ಟು ೫,೦೧,೪೭,೯೮೧ ರೂ. ಹಾಗೂ  ಇತರರ ಬ್ಯಾಂಕ ಖಾತೆಗಳಿಗೆ ವರ್ಗಾವಣೆಯಾದ ಒಟ್ಟು ೫,೪೮,೫೨,೧೦೨ ರೂ. ಹಾಗೂ  ೧೦,೫೦,೦೦,೦೮೩ ರೂ. ಜಪ್ತು ಮಾಡಲಾಗಿದ್ದು,  ೮೨,೦೭,೫೬೯ ರೂ. ಹಣವನ್ನು ಬ್ಯಾಂಕ್‌ನಲ್ಲಿ ಫ್ರಿಜ್ ಮಾಡಲಾಗಿದೆ. ಹೀಗೆ ಒಟ್ಟು ೧೧,೩೨,೦೭,೫೬೯ ರೂ. ಹಣವನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ತನಿಖಾ ತಂಡದ ಕಾರ್ಯಕ್ಕೆ ಶ್ಲಾಘನೆ : 
ಈ ಪ್ರಕರಣವನ್ನು ಬೇಧಿಸುವಲ್ಲಿ ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿಗಳಾದ ಟಿ.ಎಸ್. ಸುಲ್ಪಿ, ಅಧಿಕಾರಿಗಳಾದ ರಮೇಶ ಅವಜಿ, ಬಿ.ಎಂ. ಬಸನಗೌಡ, ಎಸ್.ಆರ್. ಹಿರೇಗಾಣ, ಎಲ್.ಎಸ್. ಹಿರೇಗೌಡ, ಸಿಬ್ಬಂದಿಗಳಾದ ಸುರೇಶ ಅಡಕಿ, ಪುಂಡಲೀಕ ಎಸ್.ಬಿರಾದಾರ,  ಈರಣ್ಣ ದಳವಾಯಿ, ಶ್ರೀಶೈಲ್ ಉಮ್ನಾಬಾದಿ, ಎಸ್.ಎಸ್.ಕಕ್ಕಳಮೇಲಿ,  ಮಲ್ಲು ಕಣಮುಚನಾಳ, ಎನ್.ಎನ್. ಪೂಜಾರ, ರವಿ ಸನಗೊಂಡ, ರಾಜೇಶ ಪಾಟೀಲ,  ಆನಂದ ತಳವಾರ,  ಬಿ.ಎನ್. ಲೋಗಾವಿ, ಜಿ. ಎಚ್. ಕುಂಬಾರ,  ಸಂಜು. ಎಲ್. ಹೊಸಮನಿ ಅವರನ್ನೊಳಗೊಂಡ ತಂಡ ಈ ಪ್ರಕರಣವನ್ನು ಬೇಧಿಸಿದ್ದು ಈ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಂಬರಗಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

COMMENTS

WORDPRESS: 0
DISQUS: