Homeಅಪರಾಧ

ಸಾಹಿತಿಗಳಿಗೆ ಉದ್ದಟತನ, ಸಿನಿಕತನ ಇರಬಾರದು: ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿ ತಪ್ಪುತ್ತದೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭ

ಉದ್ರೇಕಗೊಳಿಸದೆ ವಿವೇಕ ಮೂಡಿಸುತ್ತಿರುವ ಕನ್ನಡ ಪ್ಲಾನೆಟ್‌ ಸುದ್ದಿ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ
BBL: 14 ಎಸೆತಗಳಲ್ಲಿ 76 ರನ್..! ಮ್ಯಾಕ್ಸ್‌ವೆಲ್ ಕೈಬಿಟ್ಟು ತಪ್ಪು ಮಾಡ್ತಾ ಆರ್​ಸಿಬಿ?
ಪವರ್ ಕಟ್, ಸಿಸಿಟಿವಿಗಳು ಸ್ಥಗಿತ.. ಬಿಜೆಪಿಯವ್ರು ಏನೋ ಮಾಡ್ತಾ ಇದಾರೆ’: ಪಶ್ಚಿಮ ಬಂಗಾಳ ಸಿಎಂ Mamata Banerjee ಆತಂಕ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿ ತಪ್ಪುತ್ತದೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆʼ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ  ಮತ್ತು ವಿಮರ್ಶೆಗಳ ಮಂಡನೆಯಿಂದ  ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ ಎಂದು ಹೇಳಿದರು. ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳ ಅಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳ ಅಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

COMMENTS

WORDPRESS: 0
DISQUS: