Homeಪ್ರಾದೇಶಿಕ

ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಇಂದು

ಮುದ್ದೇಬಿಹಾಳ: ಇಲ್ಲಿನ ಡಾ. ದೇಗಿನಾಳ ಪರಿವಾರ ಹಾಗೂ ದೇಗಿನಾಳ ಫಾರ್ಮಾ ಸಹಯೋಗದಲ್ಲಿ, ಸನಾತನ ವಿದ್ಯಾಪೂರ್ವಕ ಪದವಿ ಪೂರ್ವ ಕಾಲೇಜು ಧವಳಗಿಯ ನಿವೃತ್ತ ಪ್ರಾಂಶುಪಾಲರಾದ ಎನ್.ಎ. ಬಿರಾಜದ

ಪ್ರೊ. ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಇಂದು
ಪವರ್ ಕಟ್, ಸಿಸಿಟಿವಿಗಳು ಸ್ಥಗಿತ.. ಬಿಜೆಪಿಯವ್ರು ಏನೋ ಮಾಡ್ತಾ ಇದಾರೆ’: ಪಶ್ಚಿಮ ಬಂಗಾಳ ಸಿಎಂ Mamata Banerjee ಆತಂಕ
ಸಾಹಿತಿಗಳಿಗೆ ಉದ್ದಟತನ, ಸಿನಿಕತನ ಇರಬಾರದು: ಬರಗೂರು ರಾಮಚಂದ್ರಪ್ಪ

ಮುದ್ದೇಬಿಹಾಳ: ಇಲ್ಲಿನ ಡಾ. ದೇಗಿನಾಳ ಪರಿವಾರ ಹಾಗೂ ದೇಗಿನಾಳ ಫಾರ್ಮಾ ಸಹಯೋಗದಲ್ಲಿ, ಸನಾತನ ವಿದ್ಯಾಪೂರ್ವಕ ಪದವಿ ಪೂರ್ವ ಕಾಲೇಜು ಧವಳಗಿಯ ನಿವೃತ್ತ ಪ್ರಾಂಶುಪಾಲರಾದ ಎನ್.ಎ. ಬಿರಾಜದಾರ ಅವರ ವಯೋನಿವೃತ್ತಿ ಗೌರವ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂನ್ 16ರಂದು ಸಂಜೆ 6.25 ಗಂಟೆಗೆ ಆಯೋಜಿಸಲಾಗಿದೆ.

ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಲ್ಕಿಯ ಹಿರೇಮಠದ ಪರಮ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ವೈದ್ಯರಾದ ಡಾ. ಎಂ.ಎ. ದೇಗಿನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ.ಎಸ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎನ್.ಎ. ಬಿರಾಜದಾರ ಅವರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಡಾ. ಎ.ಎಂ. ಮುಲ್ಲಾ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್. ಎತ್ತಿನಮನಿ, ತಾಲೂಕು ಅಧ್ಯಕ್ಷ ಜಿ.ಎಂ. ಹಿರೇಮಠ ಹಾಗೂ ವಿಶ್ರಾಂತ ಪ್ರಾಂಶುಪಾಲ ಎಸ್.ಎಸ್. ಹೊಸಮನಿ ಉಪಸ್ಥಿತರಿರುವರು.

ಸಮಾರಂಭದಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇಗಿನಾಳ ಫಾರ್ಮಾದ ಮಾಲೀಕರಾದ ಶಬ್ಬೀರ್ ಎ. ದೇಗಿನಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.

COMMENTS

WORDPRESS: 0
DISQUS: