ತಾಜಾ ಸುದ್ದಿ

2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ವೃತ್ತಜೀವನಕ್ಕೆ ‘ಪುಷ್ಪ 2’ ಸಿನಿಮಾ ಅತಿ ದೊಡ್ಡ ಸಕ್ಸಸ್ ನೀಡಿದೆ. ಬಿಡುಗಡೆ ಆಗಿ ತಿಂಗಳು ಕಳೆದಿದ್ದರೂ ಈ ಸಿನಿಮಾದ ಹವಾ ನಿಂತಿಲ್ಲ. ವಿವಾದಗಳ ನಡುವೆಯೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಹೊಸ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಚಿತ್ರತಂಡ ಇನ್ನೊಂದು ನ್ಯೂಸ್ ಹಂಚಿಕೊಂಡಿದೆ.

ಸುಕುಮಾರ್​ ನಿರ್ದೇಶನ ಮಾಡಿದ ‘ಪುಷ್ಪ 2’ ಸಿನಿಮಾ ಈಗಾಗಲೇ ವಿಶ್ವಾದ್ಯಂತ 1830 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನು ‘ಪುಷ್ಪ 2’ ಅಳಿಸಿ ಹಾಕಿದೆ. ಈಗ ಈ ಚಿತ್ರ 2000 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ಈ ಮೈಲುಗಲ್ಲು ತಲುಪಿದರೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗಲಿದ್ದಾರೆ. 2000 ಕೋಟಿ ರೂ. ಟಾರ್ಗೆಟ್​ ರೀಚ್​ ಆಗುವುದು ತುಸು ಕಷ್ಟ. ಆದರೂ ಕೂಡ ಚಿತ್ರತಂಡದಿಂದ ಹೊಸ ಪ್ರಯತ್ನ ಮಾಡಲಾಗುತ್ತಿದೆ.

Share the Post:

Related Post