ತಾಳಿಕೋಟಿ : ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ನಾಡಗೌಡರು ನಮ್ಮ ಪಕ್ಷಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ. ಅವರ ಶ್ರಮ ಬಹಳಷ್ಟು ಇದೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಅವರಿ
ತಾಳಿಕೋಟಿ : ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ನಾಡಗೌಡರು ನಮ್ಮ ಪಕ್ಷಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ. ಅವರ ಶ್ರಮ ಬಹಳಷ್ಟು ಇದೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಅವರಿಗೆ ಸಿಗಬೇಕು. ಇದು ನನ್ನ ಬಯಕೆಯೂ ಆಗಿದೆ ಅವರ ಕುರಿತು ವರಿಷ್ಠರೊಂದಿಗೆ ಪ್ರಾಮಾಣಿಕವಾಗಿ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಶುಕ್ರವಾರ ಬೆಂಗಳೂರಿನ ಅವರ ನಿವಾಸದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಬೆಂಬಲಿಗರು ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯ ಮಾಡಲು ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಾನು ಮತ್ತು ನಾಡಗೌಡರು ಏಕಕಾಲದಲ್ಲಿ ಪಕ್ಷದಲ್ಲಿ ಇದ್ದು ಕೂಡಿಕೊಂಡು ಕೆಲಸ ಮಾಡಿದ್ದೇವೆ. ಅವರು ಜಿಲ್ಲಾ ಪಂಚಾಯತಿಯಿAದ ತಮ್ಮ ರಾಜಕೀಯ ಜೀವನ ಆರಂಭಿಸಿ ಸುಮಾರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದಲ್ಲಿ ೪೦ ವರ್ಷಗಳವರೆಗೆ ನಿಷ್ಠರಾಗಿ ಕೆಲಸ ಮಾಡಿದ್ದಾರೆ. ಅವರ ಕುರಿತು ನನಗೆ ವೈಯಕ್ತಿಕವಾಗಿ ಬಹಳಷ್ಟು ಅಭಿಮಾನವಿದೆ. ಅವರಿಗೆ ಹಿಂದಿನ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅವಧಿಯಲ್ಲಿಯೇ ಸಚಿವ ಸ್ಥಾನ ಸಿಗಬೇಕಾಗಿತ್ತು, ಆದರೆ ಕಾರಣಾಂತರಗಳಿAದ ಸಿಕ್ಕಿಲ್ಲ. ಆದರೆ ನಾನು ಅವರ ಕುರಿತು ವರಿಷ್ಠರಲ್ಲಿ ಪ್ರಾಮಾಣಿಕವಾಗಿ ಮಾತನಾಡುತ್ತೇನೆ. ಅವರ ಕುರಿತು ಹೇಳಲು ತಾವುಗಳು ಇಲ್ಲಿಗೆ ಬರುವ ಅಗತ್ಯವಿರಲಿಲ್ಲ ಆದರೂ ಅಭಿಮಾನದಿಂದ ಬಂದಿದ್ದೀರಿ ತಮಗೆಲ್ಲರಿಗೂ ಅಭಿನಂದಿಸುತ್ತೇನೆ. ನಾವೆಲ್ಲರೂ ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರು ಸೇರಿದಂತೆ ತಾಳಿಕೋಟಿ ಮುದ್ದೇಬಿಹಾಳ ಹಾಗೂ ನಾಲತವಾಡ ಭಾಗದ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


COMMENTS