ಅಂಗ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಿ :ಪ್ರಿಯಾಂಕಾ ಜಾರಕಿಹೊಳಿ

Homeಬ್ರೇಕಿಂಗ್ ನ್ಯೂಸ್

ಅಂಗ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಿ :ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿ : ವಿಶೇಷಚೇತರು ಅಂಗ ವೈಫಲ್ಯತೆಯನ್ನು ಮೆಟ್ಟಿನಿಂತು ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕರೆ ನೀಡಿದರು. ನಗರದ ಶ್ರೀ ಪರಟಿನಾಗಲಿಂಗೇ

BBL: 14 ಎಸೆತಗಳಲ್ಲಿ 76 ರನ್..! ಮ್ಯಾಕ್ಸ್‌ವೆಲ್ ಕೈಬಿಟ್ಟು ತಪ್ಪು ಮಾಡ್ತಾ ಆರ್​ಸಿಬಿ?
ಪ್ರೊ. ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಇಂದು
ಪವರ್ ಕಟ್, ಸಿಸಿಟಿವಿಗಳು ಸ್ಥಗಿತ.. ಬಿಜೆಪಿಯವ್ರು ಏನೋ ಮಾಡ್ತಾ ಇದಾರೆ’: ಪಶ್ಚಿಮ ಬಂಗಾಳ ಸಿಎಂ Mamata Banerjee ಆತಂಕ
ಚಿಕ್ಕೋಡಿ : ವಿಶೇಷಚೇತರು ಅಂಗ ವೈಫಲ್ಯತೆಯನ್ನು ಮೆಟ್ಟಿನಿಂತು ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕರೆ ನೀಡಿದರು.
ನಗರದ ಶ್ರೀ ಪರಟಿನಾಗಲಿಂಗೇಶ್ವರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಂಗವಿಕಲ ನಾಗರಿಕರಿಗೆ ಸಾಧನ ಸಲಕರಣೆ ಹಾಗೂ ಶಾಲೆಗಳಿಗೆ ಸ್ಮಾರ್ಟಬೋರ್ಡ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂವಿಧಾನವು ನಮಗೆ ಸಮಾನ ಅವಕಾಶಗಳನ್ನು ನೀಡಿದೆ. ಸವಾಲುಗಳಿಗೆ ಕುಗ್ಗದೇ ನಿಮ್ಮ ಜೀವನದ ಕನಸುಗಳನ್ನು ಈಡೇರಿಸುವಲ್ಲಿ ಸನ್ನದ್ಧ ರಾಗಬೇಕು ಎಂದು ಹೇಳಿದರು.
ವಿಶೇಷಚೇತನರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ತಿಳಿಸಿದರು.
೧೨೫ ವಿಶೇಷಚೇತನ ಫಲಾನುಭವಿಗಳಿಗೆ ಟ್ಯಾಬ್, ತ್ರಿಚಕ್ರ ಸ್ಕೂಟಿ, ತ್ರಿಚಕ್ರ ಸೈಕಲ್, ಶ್ರವಣ ಸಾಧಕಗಳನ್ನು ಹಾಗೂ ಮತಕ್ಷೇತ್ರದ ೧೬ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ಬೋರ್ಡ್ಗಳನ್ನು ಈಗ ನೀಡಲಾಗುತ್ತಿದ್ದು, ಮುಂದೆಯೂ ಕೂಡಾ ಇನ್ನು ಹೆಚ್ಚಿನ ಅನುದಾನವನ್ನು ತಂದು ವಿಶೇಷಚೇತನರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಾಘವೇಂದ್ರ ಅಣವೇಕರ ಅವರು ಸಸಿಗೆ ನೀರೆರೆಯುವ ಸಮಾರಂಭವನ್ನು ಉದ್ಘಾಟಿಸಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ವಿಶೇಷಚೇತನರಿಗೆ ಸಲಕರಣೆ ನೀಡುತ್ತಿರುವುದು ಪ್ರಿಯಾಂಕಾ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯು ಶ್ಲಾಘನೀಯವಾಗಿದ್ದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ ಮಾತನಾಡಿ, ತಂದೆ ಸತೀಶಣ್ಣಾ ಜಾರಕಿಹೊಳಿ ಅವರ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತಂದೆಯನ್ನು ಮಾದರಿಯನ್ನಾಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಿಯಾಂಕಾ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಚಿಕ್ಕೋಡಿ ಕ್ಷೇತ್ರಕ್ಕೆ ಸುಮಾರು ರೂ. ೨೦೦ ಕೋಟಿ ಅನುದಾನವನ್ನು ತಂದು ಜನಪರವಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಭಾಕರ ಕೋರೆ, ಲಕ್ಷö್ಮಣರಾವ ಚಿಂಗಳೆ, ಅರ್ಜುನ ನಾಯಕವಾಡೆ, ಪುರಸಭೆ ಉಪಾಧ್ಯಕ್ಷೆ ನಿರ್ಮಲಾ ಪಾಟೀಲ ಸೇರಿದಂತೆ ಪ್ರಿಯಾಂಕಾ ಜಾರಕಿಹೊಳಿ ಅವರ ಅಭಿಮಾನಿಗಳು, ಕಾರ್ಯಕರ್ತರು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

COMMENTS

WORDPRESS: 0
DISQUS: