ಹಳೆ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹ

Homeಪ್ರಾದೇಶಿಕ

ಹಳೆ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹ

ವಿಜಯಪುರ : ಹಳೆಯ ಮಾದರಿಯ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ವಿವಿಧ ಪದವಿ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಸೇರಿದಂತೆ ವಿವಿಧ ವೃಂದದ ನೌಕರ

ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ರಾಷ್ಟ್ರಪತಿಗಳಿಗೆಲಿಖಿತ ಮನವಿ
ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಇಂದು
ಸಾಹಿತಿಗಳಿಗೆ ಉದ್ದಟತನ, ಸಿನಿಕತನ ಇರಬಾರದು: ಬರಗೂರು ರಾಮಚಂದ್ರಪ್ಪ
ವಿಜಯಪುರ : ಹಳೆಯ ಮಾದರಿಯ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ವಿವಿಧ ಪದವಿ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಸೇರಿದಂತೆ ವಿವಿಧ ವೃಂದದ ನೌಕರರ ನಿಯೋಗ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು, ಉದ್ಯೋಗ ಸೃಜನೆಯ ಸಂಕಲ್ಪದೊAದಿಗೆ ಮನೀವು ಕಾರ್ಯನಿರ್ವಹಿಸುತ್ತಿದ್ದೀರಿ, ಪ್ರಾಧ್ಯಾಪಕರ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆದರೆ ಅತ್ಯಂತ ಅನುಕೂಲವಾಗುತ್ತದೆ ಎಂದು ಪ್ರಾಧ್ಯಾಪಕರು ಸಚಿವರಿಗೆ ಮನವಿ ಮಾಡಿಕೊಂಡರು.
ನೌಕರರು ನಿವೃತ್ತಿ ನಂತರ ಆರ್ಥಿಕ ಅಭದ್ರತೆ ಮತ್ತು ಭವಿಷ್ಯದ ಅತಂತ್ರಕ್ಕೆ ಕಾರಣವಾಗಬಲ್ಲ ಎನ್.ಪಿ.ಎಸ್ (ಹೊಸ ಪಿಂಚಣಿ ಯೋಜನೆ) ಯೋಜನೆಯನ್ನು ರದ್ದುಗೊಳಿಸಬೇಕಾದ ಅನಿವಾರ್ಯತೆ ಇದೆ, ಈ ನೂತನ ಪಿಂಚಣಿ ಯೋಜನೆಗೆ ಸ್ಪಷ್ಟತೆ ಇಲ್ಲ, ಮಾರುಕಟ್ಟೆ ಆಧಾರಿತವಾಗಿ ಈ ಯೋಜನೆ ರೂಪಿಸಿರುವುದು ನೌಕರರ ಬಂಧುಗಳಲ್ಲಿ ಸಹಜ ಆತಂಕಕ್ಕೆ ಕಾರಣವಾಗಿದೆ, ಈ ಹಿನ್ನೆಲೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂಬ ಬೇಡಿಕೆಯ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದರು.
ಆಡಳಿತ ಯಂತ್ರದಲ್ಲಿ ಸೇವೆ ಸಲ್ಲಿಸಿ ಬದುಕಿನ ಸಂಧ್ಯಾಕಾಲದಲ್ಲಿ ಪಿಂಚಣಿ ನೆರವಾಗುತ್ತದೆ, ಆದರೆ ಅಭದ್ರತೆಯಿಂದ ಕೂಡಿದ ಹೊಸ ಪಿಂಚಣಿ ಯೋಜನೆಯಿಂದ ಪ್ರಯೋಜನ ದೊರಕುವುದು ಎಂಬ ಆಶಾಭಾವನೆಯೇ ಅನೇಕ ನೌಕರರಲ್ಲಿ ದೂರವಾಗಿ ಆತಂಕಕ್ಕೆ ಕಾರಣವಾಗಿದೆ, ಹೀಗಾಗಿ ಕೂಡಲೇ ಹಳೆಯ ಮಾದರಿಯಲ್ಲಿಯೇ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಡಾ. ಬಿ.ಎಂ .ಕೋರಬು, ಡಾ. ಚಂದ್ರಕಾAತ. ಬಿ, ಪ್ರೊ. ಎಂ.ಎಸ್. ಖೊದ್ನಾಪೂರ, ಡಾ. ಎಸ್.ಎಸ್. ಸಿದ್ದಾಪೂರ, ಪ್ರೊ. ಸಂಗಮೇಶ ಗುರವ, ಡಾ. ಬಿ.ಎನ್. ಶಾಡದಳ್ಳಿ, ಪ್ರೊ. ಸಿದ್ರಾಮ ಯರನಾಳ, ಪ್ರೊ. ವಿನೋದ ಹುಲ್ಲೂರ, ಪ್ರೊ. ಸುನೀಲ ಹತ್ತಿ, ಪ್ರೊ. ಎಸ್.ಬಿ. ಜಾಲವಾದಿ ಇನ್ನಿತರರು ಮನವಿ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು.

COMMENTS

WORDPRESS: 0
DISQUS: