ಲೋಕಸಭೆ ಚುನಾವಣೆಗೆ ದೋಸ್ತಿ ದೋಸ್ತಿ ಎಂದು ಹೋರಾಡಿದ್ರು. ಅದರಂತೆಯೇ ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವನ್ನೇ ಸಾಧಿಸಿದ್ರು. ಇದೀಗ ಮೈತ್ರಿಯೇ ಜೆಡಿಎಸ್ಗೆ ಕುತ್ತು ತಂತಾ ಅನ್ನೋ ಅನುಮಾನ ಜೆಡಿಎಸ್ ನಾಯಕರಲ್ಲೇ ಶುರುವಾಗಿದೆ. ಇದೇ ವಿಚಾರವಾಗಿಯೇ ಜೆಡಿಎಸ್ ನಾಯಕರಲ್ಲೇ ಭಿನ್ನರಾಗ ಭುಗಿಲೆದ್ದಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ಬಳಿಕ ದಳ ಮನೆಯಲ್ಲಿ ತಳಮಳ ಶುರುವಾಗಿದೆ. ಒಂದ್ಕಡೆ ಹೆಚ್ಡಿಕೆ ವಿರುದ್ಧ ಕೆಲವರು ಅಸಮಾಧಾನ ಹೊರಹಾಕ್ತಿದ್ರೆ, ಜೆಡಿಎಸ್ ಭಿನ್ನರಾಗವೇ ಆಪರೇಷನ್ ಹಸ್ತಕ್ಕೆ ಅನುಕೂಲ ಆಯ್ತಾ ಅನ್ನೋ ಚರ್ಚೆ ಹುಟ್ಟುಹಾಕಿದೆ. ಆಪರೇಷನ್ ಹಸ್ತದ ಬಗ್ಗೆ ಮುನ್ಸೂಚನೆ ಸಿಕ್ಕಿರೋ ದಳಪತಿಗಳು ಇದೀಗ ಎಚ್ಚೆತ್ತುಕೊಂಡಿದ್ದು, ಸಭೆಯೂ ನಡೆಸಿದ್ದಾರೆ.
ಬೆಂಗಳೂರು, (ಜನವರಿ 12): ಬಿಜೆಪಿಯಲ್ಲಿನ ಬಣ ಬಡಿದಾಟದಂತೆಯೇ, ದಳ ಮನೆಯಲ್ಲೂ ಅಸಮಾಧಾನ ಇದೆ. ಬಿಜೆಪಿ ಜೊತೆ ಮೈತ್ರಿಯನ್ನೇ ಶಾಸಕ ಜಿಟಿ.ದೇವೇಗೌಡ ಬಹಿರಂಗವಾಗಿಯೇ ವಿರೋಧ ಮಾಡಿದ್ರು, ಇದಿಷ್ಟೇ ಅಲ್ಲ, ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್ ಕುಮಾರಸ್ವಾಮಿಯನ್ನ ಕೂರಿಸಲು ದೇವೇಗೌಡರು ಪ್ರಯತ್ನದಲ್ಲಿದ್ದಾರೆ. ಇದು ಜೆಡಿಎಸ್ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಹಿರಿಯರ ಕಡೆಗಣನೆ ಎಂದು ಆಕ್ರೋಶಕ್ಕೂ ಕಾರಣವಾಗಿದೆ. ದಳ ಮನೆಯಲ್ಲಿನ ಭಿನ್ನರಾಗವೇ ಆಪರೇಷನ್ ಹಸ್ತಕ್ಕೆ ಚಾನ್ಸ್ ಕೊಟ್ಟಂತಾಗುತ್ತೆ ಅನ್ನೋ ಭಯದಲ್ಲಿರೋ ಕುಮಾರಸ್ವಾಮಿ ಮುನ್ನೆಚ್ಚರಿಕೆಯಾಗಿ ಸಭೆ ಮಾಡೋ ಮೂಲಕ ವಿಶ್ವಾಸಕ್ಕೆ ತೆಗೆದಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಆಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.
