ನಾಗಾರ್ಜುನ ಯಾರು?

Homeಅಂಕಣ

ನಾಗಾರ್ಜುನ ಯಾರು?

ಕೆಲವು ದಿನಗಳ ಹಿಂದೆ ನನ್ನ ಗೆಳೆಯನೊಬ್ಬನಿಗೆ  ನಾಗಾರ್ಜುನ ಯಾರು ಗೊತ್ತೆ? ಅಂದು ಕೇಳಿದೆ. ಅದಕ್ಕವನು ಗೊತ್ತಿಲ್ಲ ಎಂದು ಉತ್ತರವನ್ನಿತ್ತ. 'ನೀನು ಬೌದ್ಧ ಧರ್ಮಿಯನಾಗಿ ನಾಗಾರ್ಜುನನ ಬಗ

ಮಹಾರಾಷ್ಟ್ರದ ದಲಿತ ಚಳುವಳಿಯಲ್ಲಿ ಇತಿಹಾಸವಾಗಿ ಉಳಿದ “ನಾಮಾಂತರ ಚಳುವಳಿ”
BBL: 14 ಎಸೆತಗಳಲ್ಲಿ 76 ರನ್..! ಮ್ಯಾಕ್ಸ್‌ವೆಲ್ ಕೈಬಿಟ್ಟು ತಪ್ಪು ಮಾಡ್ತಾ ಆರ್​ಸಿಬಿ?
ಕೆಲವು ದಿನಗಳ ಹಿಂದೆ ನನ್ನ ಗೆಳೆಯನೊಬ್ಬನಿಗೆ  ನಾಗಾರ್ಜುನ ಯಾರು ಗೊತ್ತೆ? ಅಂದು ಕೇಳಿದೆ. ಅದಕ್ಕವನು ಗೊತ್ತಿಲ್ಲ ಎಂದು ಉತ್ತರವನ್ನಿತ್ತ. ‘ನೀನು ಬೌದ್ಧ ಧರ್ಮಿಯನಾಗಿ ನಾಗಾರ್ಜುನನ ಬಗ್ಗೆ ತಿಳಿದಿಲ್ಲವೆ ಎಂದು ಕೇಳಿದ್ದಕ್ಕೆ ಇದೇ ಮೊದಲು ಅವನ ಹೆಸರು ಕೇಳುತ್ತಿರುವುದು ಎಂದು ಬಿಟ್ಟ. ಇದಾದ ನಂತರ ನನ್ನ ಅನೇಕ ಬೌದ್ಧ ಧರ್ಮಿಯ ಗೆಳೆಯರಿಗೆ ನಾಗಾರ್ಜುನನ ಬಗ್ಗೆ ಕೇಳಿದೆ. ಅವರ್ಯಾರಿಗೂ ನಾಗಾರ್ಜುನನ ಬಗ್ಗೆ ತಿಳಿದಿರಲಿಲ್ಲ. ಪಠ್ಯ ಪುಸ್ತಕದಲ್ಲಿ ಆತ ನಳಂದ ವಿಶ್ವ ವಿದ್ಯಾಲಯದಲ್ಲಿದ್ದ ಒಬ್ಬ ಶ್ರೇಷ್ಟ ವಿದ್ವಾಂಸ ಎಂದು ಮಾತ್ರ ವಿವರಣೆ ನೀಡಲಾಗಿತ್ತು. ಇದಷ್ಟಕೆ ತೃಪ್ತಿಯಾಗದ ನಾನು ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದು ನಿಶ್ಚಯಿಸಿದ್ದೆ. ಹೀಗೆ ಈತನ ಬಗ್ಗೆ ಆಸಕ್ತಿ ಮೂಡಲು ಕಾರಣ ಅಣ್ಣ ನಾಗರಾಜ್ ಹೆತ್ತೂರ್ ರವರಿಂದ ಪದೇ, ಪದೇ ಈತನ ಹೆಸರನ್ನು ಕೇಳುತ್ತಿದ್ದೆ. ಹೀಗೆ ಕೇಳಿದಾಗಲೆಲ್ಲ ಈತನ ಬಗ್ಗೆ ಮನದಾಳದಲ್ಲಿ ಕುತೂಹಲದ ಬೀಜ ಒಂದು ಮೊಳಕೆ ಹೊಡೆದಿತ್ತು. ಈತನನ್ನು ಇತಿಹಾಸ ಸೇರಿದಂತೆ ಬೌದ್ಧ ಧರ್ಮವು ಯಾಕೆ ನಿರ್ಲಕ್ಯ ಭಾವದಿಂದ ನೋಡುತ್ತಿದೆ ಎಂದು ಚಿಂತಿಸಿದ್ದೆ. ನಂತರ ನಿಧಾನವಾಗಿ ಈತನ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ.
ಎರಡನೆ ಬುದ್ದ ಎಂದೆ ಹೆಸರಾಗಿದ್ದ ಮತ್ತು ಬೌದ್ಧ ಧರ್ಮಕ್ಕೆ ತನ್ನ ತಾತ್ವಿಕ ವಾದಗಳಿಂದ ಹೊಸ ಆಯಾಮವನ್ನೇ ತಂದು ಕೊಟ್ಟ ಆಚಾರ್ಯ ನಾಗಾರ್ಜುನ ಕ್ಷಿಣ ಭಾರತದ ನಮ್ಮದೆ ನೆಲದವನು(ಕರ್ನಾಟಕ). ಇವನು ಎರಡನೇ ಶತಮಾನದಲ್ಲಿ ಜೀವಿಸಿದ್ದ ಎಂದು ವಿದ್ವಾಂಸರ ಆಭಿಪ್ರಾಯ. ನಾಗಾರ್ಜುನನು ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು.
ರಾಹುಲಭದ್ರ(ಸರಹಪಾದ) ಈತನ ಗುರು.ಚಿಕ್ಕಂದಿನಲ್ಲಿ ಮೃತ್ಯು ಗಂಡಾಂತರದಿಂದ ಪಾರಾಗಲು ಅಮಿತಾಯು‍ಧಾರಿಣಿ ಎಂಬ ವ್ರತ ಮಾಡಿ ಸನ್ಯಾಸತ್ವ ಸ್ವೀಕರಿಸಿ ಬೌದ್ಧ ಧರ್ಮವನ್ನು ಸೇರಿದನೆಂದು ಆಗಿನ ಬೌದ್ಧ ಧರ್ಮದ ಪಠ್ಯಗಳನ್ನೆಲ್ಲ ಅಭ್ಯಾಸಿಸಿಯು ಅವನಿಗೆ ಸಮಾಧಾನವಾಗದೆ ಇತರ ಪಠ್ಯಗಳಿಗೆ ತಡಕಾಡಿದನೆಂದು, ಇಂತಹ ಸಂದರ್ಭದಲ್ಲಿಯೇ ದಕ್ಷಿಣ ನಾಡಿನ(ಪ್ರಾಯಶಃ ಕರ್ನಾಟಕದ) ‘ಮಹಾನಾಗ’ ಎಂಬ ಒಬ್ಬನಿಂದ ಪ್ರಜ್ಞಾಪಾರಮಿತ ಸೂತ್ರಗಳು ದೊರೆತವೆಂದು ಈ ಪಠ್ಯಗಳು ಅವನ ಹುಡುಕಾಟವನ್ನು ಕೊನೆಗೊಳಿಸಿದವೆಂದು ಮುಸುಕು ಮುಸುಕಾದ ವಿವರಣೆ ದೊರಕುತ್ತದೆ. ಈ ‘ನಾಗ’ ಅಥವ ‘ಮಹಾನಾಗ’ ಯಾರಿದ್ದಿರಬಹುದು ಎಂಬ ವಿವರಣೆ ದೊರಕುವುದಿಲ್ಲ. ನಾಗಕುಲದ ಒಡೆಯನೆಂಬ ಸಂಗತಿಯೊAದನ್ನು ನಾಗಾಜುನನ ಕೃತಿಗಳನ್ನು ಚೀನೀ ಭಾಷೆಗೆ ಭಾಷಾಂತರಿಸಿದ ಕುಮಾರ ಜೀವನು ತಿಳಿಸುತ್ತಾನೆ.
ನಾಗಾರ್ಜುನನು ಶ್ರೀ ಶೈಲದ ಬೌದ್ಧ ವಿಶ್ವವಿದ್ಯಾಲಯದಲ್ಲಿ ಸ್ವಲ್ಪಕಾಲ ಇದ್ದ ಬಗ್ಗೆ ವಿವರಣೆ ದೊರಕುತ್ತವೆ. ಈತ ಎಲ್ಲೆಲ್ಲಿ ನೆಲೆಸಿದ್ದ ಎನ್ನುವುದರ ಬಗ್ಗೆ ಅನುಮನಗಳು ಇವೆಯಾದರು ತನ್ನ ಇಳಿ ವಯಸ್ಸಿನಲ್ಲಿ ನಳಂದ ವಿಶ್ವವಿದ್ಯಾಲಯದಿಂದ ಆಧ್ರಂಪ್ರದೇಶದ ಶ್ರೀ ಪರ್ವತಕ್ಕೆ ಬಂದು ನೆಲೆಸಿ ಒಂದು ಅಧ್ಬುತವಾದ ಬೌದ್ಧ ವಿಶ್ವವಿದ್ಯಾಲಯವನ್ನು ಕಟ್ಟಿಸುತ್ತಾನೆ. ಅಲ್ಲಿದ್ದುಕೊಂಡೆ ‘ಮಾಧ್ಯಮಮಿಕಕಾರಿಕ’ ಎಂಬ ಮಹಾಗ್ರಂಥವನ್ನು ಸಂಸ್ಕೃತದಲ್ಲಿ ರಚಿಸುತ್ತಾನೆ. ಈ ಗ್ರಂಥದ ನಂತರ ಬೌದ್ಧ ಧರ್ಮದ ರೂಪವೇ ಬದಲಾಗಿ ‘ಮಹಾಯಾನ’ ಎಂಬ ಹೊಸ ಯುಗವೆ ಪ್ರಾರಂಭವಾಗುತ್ತದೆ. ನಾಗಾರ್ಜುನನ ಅನೇಕ ಕೃತಿಗಳು ಚೀನೀ, ಟಿಬೆಟ್ ಭಾಷೆಗಳಿಗೆ ಭಾಷಾಂತರಗೊಂಡಿವೆ.
ಶಾತವಾಹನರ ದೊರೆ ಗೌತಮಿ ಪುತ್ರ ಯಜ್ಞ ಶಾತಕರ್ಣಿಯು ನಾಗಾರ್ಜುನರಿಗೆ ರಾಜಾಶ್ರಯ ನೀಡಿ ನಾಗಾರ್ಜುನನ ತತ್ವ ಶೋಧನೆಗೆ ಮತ್ತು ಬುದ್ಧನ ಬೋಧನೆಗಳನ್ನು ಕ್ರೋಢಿಕರಿಸಿ ಪುನರಾವಲೋಕಿಸುವ ಕಾರ್ಯಕ್ಕೆ ಬೇಕಾದ ಸಹಾಯ ಮಾಡುತ್ತಾನೆ. ಹಾಗೆಂದೇ ನಾಗಾರ್ಜುನ ‘ಶೃಲ್ಲೇಕ(ಸಹೃಲ್ಲೇಖ) ಎಂಬ ಒಂದು ಬೃಹತ್ ಗ್ರಂಥವನ್ನು ರಾಜನಿಗೆ ಬರೆದ ಪತ್ರದಂತೆ ರಚಿಸಿದ್ದಾನೆ. ನಾಗಾರ್ಜುನರು ನಾಗಾಗಳಿಂದ ಕಲಿತ ಅರ್ಯುವೇದದ ಭಸ್ಮ ವಿದ್ಯೆಯನ್ನು ಗೌತಮಿ ಪುತ್ರ ಶಾತಕರ್ಣಿಗೆ ಅಸೆಯನ್ನು ನಿಗ್ರಹಿಸಲು ಕೆಲವು ಭಸ್ಮವನ್ನು ನೀಡುತ್ತಾನೆ. ಇದಾದ ನಂತರ ಗೌತಮಿ ಪುತ್ರ ತನ್ನ ಆಸೆಯನ್ನು ಕಳೆದುಕೊಂಡು ರಾಜ್ಯಭಾರ, ಸಂಸಾರದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಮರದ ಕೊರಡಿನಂತೆ ಬದುಕುತ್ತಾನೆ. ಇದೆಲ್ಲವನ್ನು ಗಮನಿಸಿ ಕುಪಿತಗೊಂಡ ಗೌತಮಿ ಪುತ್ರನ ಮಡದಿ ತನ್ನ ಮಗ ವಶಿಷ್ಟಿ ಪುತ್ರನಿಗೆ ನಾಗಾರ್ಜುನರನ್ನು ಕೊಲ್ಲಲು ಆದೇಶಿಸುತ್ತಾಳೆ. ಅದರಂತೆ ವಶಿಷ್ಟಿ ಪುತ್ರ ನಾಗಾರ್ಜುನರನ್ನು ಕೊಂದು ನಾಗಾರ್ಜುನಕೊಂಡದಲ್ಲಿದ್ದ ಬೌದ್ಧ ವಿಶ್ವವಿದ್ಯಾಲಯ, ಚೈತ್ಯಗಳನ್ನು, ವಿಹಾರಗಳನ್ನು ಧ್ವಂಸಗೊಳಿಸುತ್ತಾನೆ. ಹೀಗೆ ಎರಡನೇ ಬುದ್ಧ ಎಂದೆ ಹೆಸರಾಗಿದ್ದ, ಬೌದ್ಧ ಧರ್ಮಕ್ಕೆ ಮಹಾಯಾನ ಎಂಬ ಹೊಸ ಆಯಾಮವನ್ನೆ  ಕಟ್ಟಿಕೊಟ್ಟ, ತಾತ್ವಿಕ ವಾದಗಳನ್ನು ಮಂಡಿಸಿದ ನಾಗಾರ್ಜುನ ಆಚಾರ್ಯರು ಕೊಲೆಯಾದರು.
ನಾಗಾರ್ಜುನ ಬೌದ್ಧ ಧರ್ಮಕ್ಕೆ ಪ್ರವೇಶಿಸುವ ಹೊತ್ತಿಗೆ ಬುದ್ಧ ನಿರ್ವಾಣವಾಗಿ ಆರುನೂರು ವರ್ಷಗಳಾಗಿದ್ದವು. ಅದಾಗಲೆ ಬೌದ್ಧ ಧರ್ಮದಲ್ಲಿ  ಅನೇಕ ವಿರೋಧಾಭಾಸಗಳು ತಲೆ ಎತ್ತಿದ್ದವು. ಅಂತಹ ಕಾಲದಲ್ಲಿ ನಾಗಾರ್ಜುನನು ತನ್ನ ಮಾಧ್ಯಮಿಕ ತತ್ವವನ್ನು ಪ್ರಚಾರ ಪಡಿಸಿ ತಾತ್ವಿಕ ಸ್ಥಾನವನ್ನು ದೊರಕಿಸಿಕೊಟ್ಟನು. ಕಠಿಣವೆನಿಸಿದ್ದ ಬುದ್ಧ(ಬುದ್ಧನ ತತ್ವ)ನನ್ನು ಸರಳವನ್ನಾಗಿಸಿದ. ತನ್ನ ವಿದ್ವತ್, ತರ್ಕ ಮತ್ತು ಚಿಂತನೆ, ತಾತ್ವಿಕತೆಯ ಸರ್ವವು ಬುದ್ಧನದ್ದು ಎಂದು ಸಾರಿದನು. ಬುದ್ಧನಂತೆ ಶೂನ್ಯತೆಯನ್ನು ವಿವರಿಸುತ್ತ ಬಿಡುಗಡೆಯ ಮಾರ್ಗವನ್ನು ಲೋಕಕ್ಕೆ ತಿಳಿಸಿಕೊಟ್ಟನು. ಬುದ್ಧ, ನಾಗಾಜುನ, ಅಲ್ಲಮ ಪ್ರಭು ಇವರೆಲ್ಲರು ದು:ಖದ ಮೂಲವನ್ನು ಹುಡುಕಿ, ಅದರ ನಿವಾರಣೆಗೆ ಮಾರ್ಗವನ್ನು ತೋರಿಸಿಕೊಟ್ಟರು. ನಾವೆಲ್ಲರು ಅವರ ಮಾರ್ಗದಲ್ಲೆ ಸಾಗಬೇಕಿದೆ. ನಮ್ಮ ನಾಡಿನವನೆ ಆದ ನಾಗಾರ್ಜುನನನ್ನು ನಾವು ನಿರ್ಲಕ್ಷ್ಯ ಭಾವದಿಂದ ನೋಡುತ್ತಿರುವುದು ಸರಿಯಿಲ್ಲ, ಇನ್ನಾದರು ಅವನಿಗೆ ಸಿಗಬೇಕಾದ ಸ್ಥಾನ ಮಾನಗಳು ಸಿಗಲಿ.

COMMENTS

WORDPRESS: 0
DISQUS: