ಬೀದಿನಾಯಿಗಳ ಹಾವಳಿ : ಕ್ರಮಕ್ಕೆ ಅಣ್ಣಿಗೇರಿ ಆಗ್ರಹ

Homeಪ್ರಾದೇಶಿಕ

ಬೀದಿನಾಯಿಗಳ ಹಾವಳಿ : ಕ್ರಮಕ್ಕೆ ಅಣ್ಣಿಗೇರಿ ಆಗ್ರಹ

ವಿಜಯಪುರ : ವಿಜಯಪುರ ನಗರದಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಆರಂಭವಾಗಿದ್ದು, ಕೂಡಲೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹೋರಾಟಗಾರ ರಾಘವ ಅಣ್ಣಿಗೇರಿ ಒತ್ತಾಯಿಸಿದ್ದಾರೆ.

ಯೋಗ ದೈನಂದಿನ ಜೀವನದ ಭಾಗವಾಗಲಿ : ಜಿಲ್ಲಾಧಿಕಾರಿ ಡಾ.ಆನಂದ ಕೆ ಕರೆ
ನಾಡಗೌಡರಿಗೆ ಸಚಿವ ಸ್ಥಾನ: ವರಿಷ್ಠರೊಂದಿಗೆ ಮಾತನಾಡುತ್ತೇನೆ
ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ರಾಷ್ಟ್ರಪತಿಗಳಿಗೆಲಿಖಿತ ಮನವಿ
ವಿಜಯಪುರ : ವಿಜಯಪುರ ನಗರದಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಆರಂಭವಾಗಿದ್ದು, ಕೂಡಲೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹೋರಾಟಗಾರ ರಾಘವ ಅಣ್ಣಿಗೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಹಾನಗರ ಪಾಲಿಕೆ ಹಾಗೂ ಸಂಬAಧಿಸಿದ ಇಲಾಖೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿರುವ ಅವರು, ಸಾರ್ವಜನಿಕರ ಜೀವಕ್ಕೆ ರಕ್ಷಣೆ ಇಲ್ಲವೇ? ನಾಯಿ ಕಡಿತದಿಂದ ಸಾಕಷ್ಟು ಅನಾಹುತಗಳು ಆಗುತ್ತಿದ್ದರೂ ಇಲ್ಲಿಯವರೆಗೆ ಬೀದಿ ನಾಯಿಗಳ ಹಾವಳಿ ತಡೆಗೆ  ಯಾವುದೇ ಟೆಂಡರ್ ಪ್ರಕ್ರಿಯೆ ಆರಂಭಸಿರುವುದಕ್ಕೆ ಕಾರಣವೇನು? ಹಿಂಡುಗಟ್ಟಲೆ ಬೀದಿ ನಾಯಿಗಳ ಉಪಟಳಕ್ಕೆ ತತ್ತರಿಸಿದದ ಜನತೆಯ ತೊಂದರೆಗೆ ಯಾರು ಹೊಣೆ ಎಂದು ಸಾಲು ಸಾಲು ಸವಾಲುಗಳನ್ನು ಪಾಲಿಕೆಯ ಮುಂದೆ ಅಣ್ಣಿಗೇರಿ ಇರಿಸಿದ್ದಾರೆ.
ವಿಜಯಪುರದ ಬಹುತೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿದೆ, ಚಿಕ್ಕಮಕ್ಕಳು, ವಯೋವೃದ್ಧರು ನಾಯಿ ಕಡಿತಕ್ಕೆ ರೋಸಿ ಹೋಗಿದ್ದಾರೆ, ಶಾಲೆಗೆ ಹೋಗುವ ಮಕ್ಕಳು, ವಾಯು ವಿಹಾರಕ್ಕೆ ಹೋಗುವ ಜನತೆ, ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಒಮ್ಮಿಂದೊಮ್ಮೆಲೆ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬರುವುದು ಸಾಮಾನ್ಯವಾಗಿದೆ, ಇದರಿಂದ ಅನೇಕ ಅಪಘಾತಗಳು ಕೂಡ ಸಂಭವಿಸುತ್ತಿವೆ, ಅನೇಕ ಮಕ್ಕಳು ಬೀದಿ ನಾಯಿ ಕಡಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ,
ಮಹಾನಗರ ಪಾಲಿಕೆಯವರು ಶೀಘ್ರವೇ ಕಾರ್ಯಾಚರಣೆ ಮಾಡಿ, ಬೀದಿ ನಾಯಿಗಳ ಉಪಟಳದಿಂದ ಜನರನ್ನು ರಕ್ಷಿಸಬೇಕಾದ ತುರ್ತು ಅವಶ್ಯಕತೆ ಇದೆ, ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಯಾವುದೇ ಅನಾಹುತಗಳಿಗೆ ಅವಕಾಶ ಮಾಡಿಕೊಡದೇ, ತುರ್ತು ಸಭೆ ಕರೆದು, ಬೀದಿ ನಾಯಿ ಉಪಟಳದ ನಿಯಂತ್ರಣ ಕಾರ್ಯಾಚರಣೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ವಿಶೇಷ ತಂಡ ರಚಿಸಿ, ಬೀದಿ ನಾಯಿಗಳ ಹಾವಳಿಯಿಂದ ಜನತೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

COMMENTS

WORDPRESS: 0
DISQUS: