ಪ್ರಗತಿಗೆ ಸಿಎಸ್‌ಆರ್ ಅನುದಾನ ಬಳಕೆ : ಎಂ.ಬಿ.ಪಾಟೀಲ

Homeಬ್ರೇಕಿಂಗ್ ನ್ಯೂಸ್

ಪ್ರಗತಿಗೆ ಸಿಎಸ್‌ಆರ್ ಅನುದಾನ ಬಳಕೆ : ಎಂ.ಬಿ.ಪಾಟೀಲ

ವಿಜಯಪುರ : ಕಳೆದ ವರ್ಷದ ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗಿದ್ದರಿಂದ ಪ್ರವಾಹ ನಿಯಂತ್ರಣ ನಿಧಿಯಡಿ ಹಾಗೂ ಮಹಾನಗರ ಪಾಲಿಕೆ ವಿಜಯಪುರದಿಂದ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳನ

ಇಂದಿರಾ ಲಂಕೇಶ್ ಇನ್ನಿಲ್ಲ
ಸಂಘ ಪರಿವಾರ ಕೆಣಕಿದವರು ಉಳಿದಿಲ್ಲ… ಜಿಗಜಿಣಗಿ ಮಾತು ಸತ್ಯ ಎಂದ ಗಣಿಹಾರ
ಅಂಗ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಿ :ಪ್ರಿಯಾಂಕಾ ಜಾರಕಿಹೊಳಿ
ವಿಜಯಪುರ : ಕಳೆದ ವರ್ಷದ ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗಿದ್ದರಿಂದ ಪ್ರವಾಹ ನಿಯಂತ್ರಣ ನಿಧಿಯಡಿ ಹಾಗೂ ಮಹಾನಗರ ಪಾಲಿಕೆ ವಿಜಯಪುರದಿಂದ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಚಿವ ಡಾ.ಎಂ.ಬಿ. ಪಾಟೀಲ ಶುಕ್ರವಾರ ಪರಿಶೀಲಿಸಿದರು.
ನಗರದ ಶಿವಾಜಿ ವೃತ್ತದಲ್ಲಿ ಕೈಗೊಂಡ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನಗರದ ಕೆಲವು ಮನೆಗಳಲ್ಲಿ ನೀರು ನುಗ್ಗಿ ಹಾನಿಯಾಗಿತ್ತು. ಇದು ಮತ್ತೆ ಪುನರಾವರ್ತನೆಯಾಗಬಾರದೆಂದೇ ಕೋಟೆ ಗೋಡೆ ಕಂದಕ ಹಾಗೂ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಂದಕಗಳಲ್ಲಿ ಮಣ್ಣು ಕುಸಿಯಬಾರೆಂದು ಪಿಚ್ಚಿಂಗ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಇದಕ್ಕೆಂದೇ ೬ ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವು ಕಾಮಗಾರಿಗಳ ಬದಲಾವಣೆ ಮಾಡಿ ಈ ಕಾಮಗಾರಿಗೆ ಅನುದಾನ ಹೊಂದಾಣಿಕೆ ಮಾಡಲಾಗಿದೆ. ಬಿಡಿಎ ಹಾಗೂ ಪಾಲಿಕೆಯಿಂದ ಕಾಮಗಾರಿ ಬದಲಾವಣೆ ಮಾಡಿ ಅನುದಾನ ಒದಗಿಸಲಾಗುತ್ತಿದೆ. ಆದಾಗ್ಯೂ ಅಗತ್ಯ ಬಿದ್ದರೆ ನನ್ನ ಮತಕ್ಷೇತ್ರದ ಕೆಲ ಕಾಮಗಾರಿ ಬದಲಾವಣೆ ಮಾಡಿ ಇದಕ್ಕೆ ಅನುದಾನ ಕೊಡಿಸುವುದಾಗಿ ಸಚಿವರು ಹೇಳಿದರು.
ಇನ್ನೂ ಅನುದಾನದ ಅಗತ್ಯ ಬಿದ್ದರೆ, ಯಾವುದಾದರೂ ಕಂಪನಿಯನ್ನು ಸಂಪರ್ಕಿಸಿ, ಆ ಕಂಪನಿಯ ಸಿಎಸ್‌ಆರ್ ಅನುದಾನವನ್ನೂ ಕಾಮಗಾರಿಗೆ ಕೊಡಿಸುವುದಾಗಿ ಸಚಿವರು ಹೇಳಿದರು.
ನಗರದಲ್ಲಿ ಅದೆಷ್ಟೇ  ಮಳೆಯಾದರೂ ನಗರ ಭಾಗದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಂದಕ ಸೇರಿದಂತೆ ಇತರೆ ಸ್ಥಳಗಳಲ್ಲಿ ಶಾಶ್ವತವಾದ ಕಾಮಗಾರಿಗಳನ್ನು  ಮಾಡಲಾಗುತ್ತಿದೆ ಎಂದರು.
ಶಿವಾಜಿ ವೃತ್ತದಿಂದ ಬಿದರಿ ಆಸ್ಪತ್ರೆಯವರೆಗೆ ೩ ಕಿ.ಮೀ  ಕಾಮಗಾರಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ನಗರದ ಹೊರ ಭಾಗದಿಂದ  ನೀರು ಒಳಗಡೆ ಬರುವುದನ್ನು ತಪ್ಪಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಎಷ್ಟೇ ಮಳೆಯಾದರೆ ನಗರದ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಸ್ವತಃ ಜಿಲ್ಲಾಧಿಕಾರಿ, ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾಮಗಾರಿ ಉಸ್ತುವಾರಿ ನೋಡುತ್ತಿದ್ದಾರೆ ಎಂದರು.
ನಗರದಲ್ಲಿ ಒಟ್ಟು ೧೬೮ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನಗರದಲ್ಲಿ ಪ್ರಗತಿಯಲ್ಲಿದ್ದು ಇಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡರೆ, ನಗರದಲ್ಲಿ ಕಿಂಚಿತ್ ಪ್ರವಾಹ ಬಂದರೂ ಸಮಸ್ಯೆಯಾಗದು ಎಂದರು.
ರಸ್ತೆಗಳಿಗೆ ೧೫೦ ಕೋಟಿ ರೂ. ಹಣ ಮಂಜೂರು :
ನಗರ ಭಾಗದ ರಸ್ತೆಗಳ ಕಾಮಗಾರಿಗೆ ೧೫೦ ಕೋಟಿ ಹಣ ಮಂಜೂರು ಮಾಡಲಾಗಿದೆ. ಈ ಮೊತ್ತದಲ್ಲಿ ರಸ್ತೆಗಳ ಕೆಲಸ ಕಾಮಗಾರಿಗಳು ನಡೆಯುತ್ತವೆ ಎಂದ ಅವರು, ನಗರದಲ್ಲಿ  ಪ್ರವಾಹ ತಡೆ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.
ನಗರದಲ್ಲಿರುವ ಜಿಲ್ಲಾ ಸರ್ಕಾರಿ ಆಯುಷ್ ಆಸ್ಪತ್ರೆ ಹತ್ತಿರದ ಕೋಟೆ ಗೋಡೆ ಹತ್ತಿರ ಬಾಕ್ಸ್ ಕಲ್ಬರ್ಟ್ ನಿರ್ಮಿಸುವುದು ಹಾಗೂ ಇತರೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದರು.
ವಾರ್ಡ ನಂ. ೩೧ ರಲ್ಲಿ ನವಭಾಗ ಮುಖ್ಯ ರಸ್ತೆಯ ಕೋಟೆ ಗೋಡೆ ಹತ್ತಿರದ ಬಾಕ್ಸ್ ಕಲ್ಮರ್ಟವರೆಗೆ ಮೊದಲ ಹಂತದಲ್ಲಿ ೪೦ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು. ವಾರ್ಡ್ ನಂ. ೦೫ ಮತ್ತು ೦೬ ರಲ್ಲಿ ಬರುವ ಕೆ.ಸಿ. ನಗರ, ಯಲ್ಲಾಲಿಂಗ್ ನಗರದಿಂದ ನಾಲಾವರೆಗೆ ಹಾಗೂ ಇತರೆ ಅವಶ್ಯಕ ಸ್ಥಳಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು ಎಂದರು. ವಾರ್ಡ್ ನಂ. ೩೪ ರಲ್ಲಿ ಬರುವ ಬಿದನೂರು ಪೆಟ್ರೋಲ್ ಪಂಪ್ ದಿಂದ ಕೋಟೆ ಗೋಡೆವರೆಗೆ  ೧.೨೦ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸುವುದು. ವಾರ್ಡ್ ನಂ. ೨೭ ರ ಸಕಾಫ ರೋಜಾ ರಸ್ತೆಯ ಮುಬೀನ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ೬೪ ಲಕ್ಷ ರೂ. ವೆಚ್ಚದಲ್ಲಿ ಮಳೆನೀರು ಚರಂಡಿ ನಿರ್ಮಿಸಲಾಗುವುದು ಎಂದರು.
೨೦೨೫-೨೬ನೇ ಸಾಲಿನಲ್ಲಿ ೧೫ನೇ ಹಣಕಾಸು ಅನುದಾನದಡಿ ೫೧.೪ ಲಕ್ಷ ರೂ. ವೆಚ್ಚದಲ್ಲಿ ನಗರದ ಇಂಡಿ ರಸ್ತೆಯಲ್ಲಿ ಬರುವ ಎಸ್.ಟಿ.ಪಿ. ಹತ್ತಿರ (ಮೈ ಹೋಮ್) ಸಿ.ಡಿ. ಹಾಗೂ ಮಳೆ ನೀರು ಚರಂಡಿ ನಿರ್ಮಿಸುವುದು. ರಾಜ್ಯ ಪ್ರಕೃತಿ ನಿರ್ವಹಣೆ ಅನುದಾನಡಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೋನಿವರೆಗಿನ ಕಂದಕದಲ್ಲಿ ಮಳೆನೀರು ಸರಾಗವಾಗಿ ಹರಿಯಲು ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು ೨ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ನಗರದ ಸರದಾರ ವಲ್ಲಭಭಾಯಿ ಪಟೇಲ್ ರಸ್ತೆಯ ಪಕ್ಕದಲ್ಲಿರುವ (ರಾಮನಗರ) ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಅಭಿವೃದ್ಧಿಪಡಿಸಿದ ವಸತಿ ಬಡಾವಣೆ ಹತ್ತಿರ ಇರುವ ಜಂಕ್ಷನ್ ಸುಧಾರಣೆ (ಬಸ್ ಶೆಲ್ಮರ್, ಕ್ರಾಸ್ ಡೇನ್, ಹೊರಚರಂಡಿ ಹಾಗೂ ಇತರೆ) ಅಭಿವೃದ್ಧಿ ಕಾಮಗಾರಿಗೆ ೨.೫೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಟ್ಟು ೫೧೪.೮೦ ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿದ್ದು, ೧೬೮.೪೫ ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಬಳಿಕ ಮನ್ನತ್ ಹಾಲ್ ಬಳಿ, ನವಭಾಗ್ ರಸ್ತೆ, ಕಸ್ತೂರಿ ಕಾಲೋನಿಯಲ್ಲಿನ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು.
ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಪಾಲ್ಗೊಂಡಿದ್ದರು.

COMMENTS

WORDPRESS: 0
DISQUS: