ರೈತ ಸಂಘದಿಂದ ಬೃಹತ್ ಪ್ರತಿಭಟನೆ

Homeಪ್ರಾದೇಶಿಕ

ರೈತ ಸಂಘದಿಂದ ಬೃಹತ್ ಪ್ರತಿಭಟನೆ

ತಾಳಿಕೋಟಿ : ಫಸಲ್ ಭೀಮಾ ಸಮರ್ಪಕ ಅನುಷ್ಠಾನ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಘಟಕದ

ಬೀದಿನಾಯಿಗಳ ಹಾವಳಿ : ಕ್ರಮಕ್ಕೆ ಅಣ್ಣಿಗೇರಿ ಆಗ್ರಹ
ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ನಾಡಗೌಡ
ಡಾ.ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕರನ್ನು ವಜಾ ಮಾಡಿ : ಮನವಿ
ತಾಳಿಕೋಟಿ : ಫಸಲ್ ಭೀಮಾ ಸಮರ್ಪಕ ಅನುಷ್ಠಾನ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಘಟಕದ ವತಿಯಿಂದ ಮೂಕಿಹಾಳ ಗ್ರಾಮದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹಾಗೂ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ಮೂಕಿಹಾಳ ಗ್ರಾಮದ  ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೂರಾರು ರೈತರು ಲಾಡ್ಲೆ ಮಶಾಖ್ ದರ್ಗಾದವರೆಗೆ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ದರ್ಗಾದ ಆವರಣದಲ್ಲಿ ಹಮ್ಮಿಕೊಂಡ ರೈತರ ಪ್ರತಿಭಟನೆ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ್ ನಡಹಳ್ಳಿ, ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ಮೂಕಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳು ಹಳ್ಳಿಗಳ ರೈತರಿಗೆ  ಫಸಲ್ ಭಿಮಾ ಯೋಜನೆಯ ಬೆಳೆ ವಿಮಾ ಪರಿಹಾರ ಸಿಕ್ಕಿಲ್ಲ ಅದರಲ್ಲಿಯೂ ೨೦೨೫-೨೬ನೇ ಸಾಲಿನ ಫಸಲ್ ಭಿಮಾ ಯೋಜನೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಅಧಿಕಾರಿಗಳು ಈ ಕುರಿತು ಸ್ಪಷ್ಟವಾದ ಯಾವುದೇ ಮಾಹಿತಿ ನೀಡುತ್ತಿಲ್ಲ ಇದರ ಕುರಿತು ಪಾರದರ್ಶಕವಾಗಿ ತನಿಖೆ ಮಾಡಬೇಕೆಂದು ಆಗ್ರಸಿದರು.
ಈ ಪಂಚಾಯತಿ ವ್ಯಾಪ್ತಿಯಲ್ಲಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಇದೆ ಅಲ್ಲಿನ ಗ್ರಾಮಸ್ಥರು ಅಶುದ್ಧ ನೀರು ಸೇವಿಸಿ ರೋಗ ಗ್ರಸ್ತರಾಗುತ್ತಿದ್ದಾರೆ ಈ ಗಂಭೀರ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು. ಮೂಕಿಹಾಳ ಗ್ರಾ.ಪಂ.ದಲ್ಲಿ ಅಧಿಕಾರಿಗಳು ಪ್ರತಿ ಕೆಲಸಕ್ಕೂ ಬೇಡಿಕೆ ಇಡುತ್ತಾರೆ ಎಂದು ಆರೋಪಿಸಿದ ರೈತ ಮುಖಂಡರು ಮೇಲಾಧಿಕಾರಿಗಳು ಇದನ್ನು ನಿಯಂತ್ರಿಸಬೇಕು. ಇದರ ಜೊತೆಗೆ ರೈತರ ಜಮೀನುಗಳಿಗೆ ಹೋಗಲು ದಾರಿ, ಸಮರ್ಪಕ ವಿದ್ಯುತ್ ಪೂರೈಕೆ ಹೀಗೆ ರೈತರ ಹಲವಾರು ಗಂಭೀರ ಸಮಸ್ಯೆಗಳಿವೆ ಅವುಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸದೆ ಹೋದರೆ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಿಡಿಒ ಹಾಗೂ ಕೃಷಿ ಇಲಾಖೆಯ ಜಿಲ್ಲಾ ಅಧಿಕಾರಿಗಳು ಫಸಲ್ ಭೀಮಾ ಯೋಜನೆ ಕುರಿತು ಸಾಕಷ್ಟು ವಿವರಣೆ ನೀಡಿದರೂ ರೈತರು ಇದರಿಂದ ಸಹಮತವಾಗಲಿಲ್ಲ. ಒಂದು ಹಂತದಲ್ಲಿ ಸಭೆಯಲ್ಲಿ ಗದ್ದಲ ಏರ್ಪಟ್ಟಾಗ ಸಿಪಿಐ ಮೊಹಮ್ಮದ್ ಫಸಿವುದ್ದೀನ ಅವರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ಕೊನೆಯಲ್ಲಿ ತಾಳಿಕೋಟಿ ತಹಶೀಲ್ದಾರ ದಾ.ವಿನಯಾ ಹೂಗಾರ ಅವರು ಮಾತನಾಡಿ, ರೈತರು ಸಭೆಯಲ್ಲಿ ಸಲ್ಲಿಸಿದ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಒಂದು ತಿಂಗಳ ಅವಧಿಯ ಒಳಗಾಗಿ ಪರಿಹಾರವನ್ನು ನೀಡಲಾಗುವುದು ಇಲ್ಲಿಗೆ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಕೇಳಿದಾಗ ಇದಕ್ಕೆ ಸ್ಪಂದಿಸಿದ ರೈತ ಮುಖಂಡರು ಪ್ರತಿಭಟನೆಯನ್ನು ನಿಲ್ಲಿಸಿದರು.
ಈ ಸಮಯದಲ್ಲಿ ತಾಲೂಕ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಯುವ ಘಟಕದ ಅಧ್ಯಕ್ಷ ದೇವರಾಜ ನಾಗೂರ, ದೇವರ ಹಿಪ್ಪರಗಿ ಘಟಕದ ಅಧ್ಯಕ್ಷರಾದ ಸಂಗಣ್ಣ ಬಿರಾದಾರ, ರೈತ ಮುಖಂಡರಾದ ಮಲ್ಲಯ್ಯ ಹಿರೇಮಠ, ನಾಗೇಶ ಕಲ್ಲದೇವನಹಳ್ಳಿ, ಶಿವರಾಜ ಗುಗ್ಗಳ್ಳಿ, ಸಾಹೇಬಪಟೇಲ ಮೊಕಾಶಿ, ಜಾವೀದ ಪಟೇಲ, ತಾಪಂ ಇಒ ಅನಸೂಯಾ ಚಲವಾದಿ, ಆರ್ ಡಬ್ಲ್ಯೂ ಎಸ್ ಇಲಾಖೆಯ ಎಇಇ ಆರ್.ಎಸ್. ಹಿರೇಗೌಡರ, ಜಿಪಂ ಎಇಇ ಜೆ.ವೈ. ಮುರಾಳ, ಜಿಲ್ಲಾ ಉಪ ಕೃಷಿ ನಿರ್ದೇಶಕ ಶರಣಗೌಡ ಮಾಲಿಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮಣ ಸಂಗೋಗಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಸಾರಿಗೆ ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ, ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಸಿಪಿಐ ಮೊಹಮ್ಮದ್ ಫಸಿಯುದ್ದೀನ, ಜ್ಯೋತಿ ಕೋತ್, ಹೆಸ್ಕಾಂ ಎಇಇ ವಿಜಯಕುಮಾರ ಬಿರಾದಾರ, ಪಿಡಿಒ ಶ್ರೀದೇವಿ ಗುಂಡಾಪೂರ, ರೈತ ಸಂಘದ ಪದಾಧಿಕಾರಿಗಳು, ರೈತರು ಉಪಸ್ಥಿತರಿದ್ದರು.

COMMENTS

WORDPRESS: 0
DISQUS: