ಸಂಸದ ಜಿಗಜಿಣಗಿಗೆ ಆಲಗೂರ 3 ಪ್ರಶ್ನೆ

Homeರಾಜ್ಯ

ಸಂಸದ ಜಿಗಜಿಣಗಿಗೆ ಆಲಗೂರ 3 ಪ್ರಶ್ನೆ

ವಿಜಯಪುರ : ಸಂಘ ಪರಿವಾರದ ನೊಂದಣಿ ದಲಿತ ಸಮುದಾಯಕ್ಕೆ ಏಕೆ ಬೇಕು ಎಂಬ ಸಂಸದ ರಮೇಶ ಜಿಗಜಿಣಗಿ ಅವರ ನಿಲುವಿಗೆ ಖಾರವಾದ ಅಸಮಾಧಾನ ಜಿಲ್ಲೆಯಿಂದ ವ್ಯಕ್ತವಾಗುತ್ತಿತ್ತು, ಮಾಜಿ ಶಾಸಕ ಹಾಗೂ

ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ AI ತಂತ್ರಜ್ಞಾನದ ಹೊಸ ಹೆಜ್ಜೆ
ಧಾರ್ಮಿಕ ಸ್ಥಳಗಳಿಗೆ ಸಚಿವ ಡಾ. ಎಂ.ಬಿ. ಪಾಟೀಲ ಭೇಟಿ
ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

ವಿಜಯಪುರ : ಸಂಘ ಪರಿವಾರದ ನೊಂದಣಿ ದಲಿತ ಸಮುದಾಯಕ್ಕೆ ಏಕೆ ಬೇಕು ಎಂಬ ಸಂಸದ ರಮೇಶ ಜಿಗಜಿಣಗಿ ಅವರ ನಿಲುವಿಗೆ ಖಾರವಾದ ಅಸಮಾಧಾನ ಜಿಲ್ಲೆಯಿಂದ ವ್ಯಕ್ತವಾಗುತ್ತಿತ್ತು, ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರೊ.ರಾಜು ಆಲಗೂರ ಅವರು ಜಿಗಜಿಣಗಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಸಂಸದ ಜಿಗಜಿಣಗಿ ಅವರಿಗೆ ಮೂರು ಪ್ರಶ್ನೆ ಮಾಡಿರುವ ಆಲಗೂರ, ಸಂಘ ಪರಿವಾರವನ್ನು ದಲಿತರು ಪ್ರಶ್ನಿಸಿದರೆ ಸರ್ವನಾಶವಾಗುವುದಾದರೆ ಸಂಘ ಪರಿವಾರ ಭಯೊತ್ಪಾದನೆಯ ಸಂಘಟನೆಯೇ?, ದೇಶದ ಪ್ರಜೆಯಾದವರು ಸಂವಿಧಾನದ ಕೆಳಗಡೆ ಪ್ರತಿಯೊಂದನ್ನು ಪ್ರಶ್ನಿಸುವ ಹಕ್ಕಿದೆ ಎಂಬುದನ್ನು ಸಂಸದರು ಮರೆತಿದ್ದಾರೆಯೇ? ಹಾಗೂ ಜಿಗಜಿಣಿಯವರೆ ದಲಿತರ ಪ್ರತಿನಿಧಿಯಾಗಿರುವ ನೀವು ಏಂದಾದರು ಲೋಕಸಭೆಯಲ್ಲಾಗಲಿ ಅಥವಾ ಸಾರ್ವಜನಿಕವಾಗಿ ಅವರ ಸಮಸ್ಯೆ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗಳನ್ನು ಮುಂದಿರಿಸಿದ್ದಾರೆ.

ಕರ್ನಾಟಕ ರಾಜ್ಯದ ನೂತನ ಗೃಹ ಮಂತ್ರಿಗಳಾದ ಪ್ರಿಯಾಂಕ ಖರ್ಗೆರವರು ಕಳೆದ ಹಲವಾರು ದಿವಸಗಳಿಂದ ಆರ್‌ಎಸ್‌ಎಸ್ ಸಂಘಟನೆಯ ನೋಂದಣಿಯನ್ನು ಮಾಡಿಸಬೇಕು ಎಂಬ ವಿಚಾರ ವ್ಯಕ್ತಪಡಿಸಿದ್ದಾರೆ, ದೇಶದಲ್ಲಿ ಇರುವ ಎಲ್ಲಾ ಸಂಘ ಸಂಸ್ಥೆಗಳು ನೋಂದಣಿಯನ್ನು ಮಾಡಿಸಿಕೊಂಡಿರುವಾಗ ಸಂಘ ಪರಿವಾರ ಏಕೆ ನೊಂದಣಿ ಮಾಡಿಸಿಕೊಳ್ಳಬಾರದು ಎಂಬ ಒಬ್ಬ ದೇಶ ಪ್ರಜೆಯಾಗಿ ಹಾಗೂ ರಾಜ್ಯದ ಗೃಹ ಮಂತ್ರಿಗಳಾಗಿ ಪ್ರಶ್ನೆಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಇದು ನ್ಯಾಯಯುತವಾದ ಪ್ರಶ್ನೆ ಇದರಲ್ಲಿ ಅಂಜುವ ವಿಷಯ ಏನಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಯಾಗಿ ನಮ್ಮ ಸಂಸದರಾದ ರಮೇಶ ಜಿಗಜಿಣಗಿ ಅವರು ಖರ್ಗೆ ಅವರ ತಲೆಯಲ್ಲಿ ಬುದ್ಧಿ ಇಲ್ಲ, ದಲಿತರು ಆರ್‌ಎಸ್‌ಎಸ್ ಬಗ್ಗೆ ಚಕಾರ ಎತ್ತಬಾರದು ಚಕಾರ ಎತ್ತಿದರೆ ಸರ್ವನಾಶವಾಗುತ್ತಾರೆ ಎಂದು ಹೇಳುವುದು ಮೂರ್ಖತನದ ಪರಮಾವಧಿಯ ಹೇಳಿಕೆಯಾಗಿದೆ ಎಂದು ಆಲಗೂರ ತಿರುಗೇಟು ನೀಡಿದ್ದಾರೆ.

ಇನ್ನು ಮುಂದೆ ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ಹಗುರವಾಗಿ ಮಾತನಾಡಿದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

 

COMMENTS

WORDPRESS: 0
DISQUS: