ತಾಜಾ ಸುದ್ದಿ

ಮಧ್ಯ ಪ್ರದೇಶ: ಲಿವ್​ಇನ್ ಸ್ನೇಹಿತೆಯನ್ನು ಕೊಂದು ಫ್ರಿಡ್ಜ್​ನಲ್ಲಿಟ್ಟ ವಿವಾಹಿತ! ಬರೋಬ್ಬರಿ 8 ತಿಂಗಳು ಅಲ್ಲೇ ಇತ್ತು ಮೃತದೇಹ

ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೇ ಹೋಲುವಂತಹ ಭೀಕರ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ಘಟಿಸಿದೆ. ಲಿವ್ ಇನ್ ಸ್ನೇಹಿತೆಯನ್ನು ವಿವಾಹಿತನೋರ್ವ ಕೊಂದು 8 ತಿಂಗಳ ಕಾಲ ಫ್ರಿಡ್ಜ್​ನಲ್ಲಿಟ್ಟಿದ್ದಾನೆ. ಪ್ರಕರಣ ಈಗ ಬೆಳಕಿಗೆ ಬಂದಿದ್ಹೇಗೆ? ಹಂತಕನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ಹೇಗೆ ಎಂಬ ಮಾಹಿತಿ ಇಲ್ಲಿದೆ.

ಭೋಪಾಲ್, ಜನವರಿ 11: ವಿವಾಹಿತನೊಬ್ಬ ಲಿವ್​ಇನ್ ರಿಲೇಶನ್​ ಶಿಪ್​ನಲ್ಲಿದ್ದ ಸ್ನೇಹಿತೆಯನ್ನ ಕೊಂದು, ಮೃತದೇಹದ ಕೈಗಳನ್ನು ಕುತ್ತಿಗೆಗೆ ಬಲವಾಗಿ ಕಟ್ಟಿ ಫ್ರಿಡ್ಜ್​ನಲ್ಲಿಟ್ಟಿದ್ದ ಭೀಬತ್ಸ ಕೃತ್ಯ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿ ಸಂಜಯ್ ಪಾಟಿದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Share the Post:

Related Post