ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ

HomeUncategorized

ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ

ಅವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ ಮೇಲೆ ಪ್ರೀತಿ ಮಾಯವಾಗಿ, ಅನುಮಾನದ ರೋಗ ಹೆಚ್ಚಾಗಿತ್ತು. ಆದ್ರೆ ಗವಿಮಠದ ಜಾತ್ರೆಗೆ ವ್ಯಾಪರಕ್ಕ

ಕೆಲವೇ ದಿನಗಳಲ್ಲಿ ಬ್ರೋಕರ್​ಗಳು ನಿಮ್ಮ ಮನೆಗೆ ಬರ್ತಾರೆ, ಆಸ್ತಿ ಮಾರಿಕೊಳ್ಳಬೇಡಿ: ಡಿಕೆ ಶಿವಕುಮಾರ್​
Hello world!
ಉದ್ರೇಕಗೊಳಿಸದೆ ವಿವೇಕ ಮೂಡಿಸುತ್ತಿರುವ ಕನ್ನಡ ಪ್ಲಾನೆಟ್‌ ಸುದ್ದಿ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ

ಅವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ ಮೇಲೆ ಪ್ರೀತಿ ಮಾಯವಾಗಿ, ಅನುಮಾನದ ರೋಗ ಹೆಚ್ಚಾಗಿತ್ತು. ಆದ್ರೆ ಗವಿಮಠದ ಜಾತ್ರೆಗೆ ವ್ಯಾಪರಕ್ಕೆ ಅಂತ ಪತ್ನಿಯನ್ನು ಕರೆದುಕೊಂಡು ಬಂದಿದ್ದ ಪಾಪಿ ಪತಿ, ಇಲ್ಲಿ ಕೂಡಾ ಪತ್ನಿಯ ಮೇಲೆ ಸಂಶಯ ಪಟ್ಟು, ಜಗಳ ಆರಂಭಿಸಿದ್ದ. ಜಗಳ ವಿಕೋಪಕ್ಕೆ ಹೋಗಿದ್ದರಿಂದ, ಇಂದು ಮಠದ ಮೈದಾನದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಜಾತ್ರೆಯಲ್ಲಿ ಹುಟ್ಟಿಕೊಂಡಿದ್ದ ಲವ್ ಜಾತ್ರೆಯಲ್ಲಿ ಅಂತ್ಯವಾಗಿದೆ.

ಕೊಪ್ಪಳ, (ಜನವರಿ 12): ಕೊಪ್ಪಳದ ಗವಿಮಠದ ಮುಂದಿನ ಮೈದಾನದಲ್ಲಿ ಇಂದು (ಜನವರಿ 12) ಜನನಿಬಿಡ ಪ್ರದೇಶದಲ್ಲಿಯೇ ಮಹಿಳೆಯೋರ್ವಳ ಬರ್ಬರ ಕೊಲೆಯಾಗಿದೆ. ದಕ್ಷಿಣ ಭಾರತದ ಕುಂಬಮೇಳ ಅಂತಲೇ ಖ್ಯಾತಿ ಪಡೆದಿರೋ ಗವಿಮಠದ ಜಾತ್ರೆ ಇದೇ ಜನವರಿ 15 ರಿಂದ ಆರಂಭವಾಗಲಿದೆ. ಜಾತ್ರೆ ಅಂಗವಾಗಿ ಎಲ್ಲಾ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ. ಜಾತ್ರೆಗೆ ರಾಜ್ಯದ ವಿವಿಧಡೆಯಿಂದ ವ್ಯಾಪರಸ್ಥರು ಬಂದಿದ್ದು, ಅವರಿಗಾಗಿಯೇ ಮಠದ ಮುಂದಿನ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪರಸ್ಥರು, ತಮಗೆ ನಿಗದಿ ಪಡಿಸಿದ ಜಾಗದಲ್ಲಿ ಸ್ಟಾಲ್ ಗಳನ್ನು ಹಾಕುತ್ತಿದ್ದಾರೆ. ಇದರ ಮಧ್ಯೆ ಕೊಲೆಯೊಂದು ನಡೆದಿದೆ. ಹೌದು…ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿಯನ್ನೇ ಪತಿರಾಯ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

COMMENTS

WORDPRESS: 0
DISQUS: