ಡಾ.ಸಚಿನ್ ದೇಸಾಯಿಗೆ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಗೌರವ

Homeಶಿಕ್ಷಣ

ಡಾ.ಸಚಿನ್ ದೇಸಾಯಿಗೆ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಗೌರವ

ಬಾಗಲಕೋಟೆ : ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ.ಸಚಿನ್ ದೇಸಾಯಿ ಅವರನ್ನು  ೨೦೨೬-೨೭ ನೇ ಸಾಲಿಗೆ ಜಿರಿಯಾಟ್

2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ
ಪಶು ವಿಜ್ಞಾನದಲ್ಲಿ ಗಂಗಾಧರ ಅಪೂರ್ವ ಸಾಧನೆ ಬರೆದ ಗಂಗಾಧರ
ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು
ಬಾಗಲಕೋಟೆ : ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ.ಸಚಿನ್ ದೇಸಾಯಿ ಅವರನ್ನು  ೨೦೨೬-೨೭ ನೇ ಸಾಲಿಗೆ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಕಾರ್ಯಕಾರಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಕರ್ನಾಟಕ ಶಾಖೆಗೆ ಕಾರ್ಯದರ್ಶಿಯಾಗಿ ಇವರನ್ನು ನೇಮಕ ಮಾಡಲಾಗಿದೆ.
ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳು ಮತ್ತು ಹಿರಿಯ ನಾಗರಿಕರ ಜೀವನ ಸುಧಾರಣೆ ಕುರಿತು ಡಾ.ಸಚಿನ್ ದೇಸಾಯಿ ಅವರು ಬರೆದ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಹಿರಿಯ ನಾಗರಿಕರ ಆರೋಗ್ಯ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ಹೆಚ್ಚಿನ ಪದವಿಯನ್ನು ಪಡೆದ ಡಾ.ಸಚಿನ್ ದೇಸಾಯಿ ಅವರು ಇಂಡಿಯನ್ ಜರ್ನಲ್ ಆಫ್ ಜಿರಿಯಾಟ್ರಿಕ್ ಕೇರ್ ನಿಯತಕಾಲಿಕೆಯ ಸಂಪಾದಕರ ಮಂಡಳಿಯ ಸದಸ್ಯರಾಗಿರುವರು. ವೃದ್ಧಾಪ್ಯ ಸಂಬಂಧಿತ ವಯೋಸಹಜ ಕಾಯಿಲೆಗಳು, ಚಿಕಿತ್ಸೆ ಮತ್ತು ಕುಟುಂಬ ಘಟಕದಲ್ಲಿ ಹಿರಿಯರ ಆರೋಗ್ಯ ಕಾಳಜಿ ವಿಷಯವಾಗಿ ಕರ್ನಾಟಕ ಮತ್ತು ವಿವಿಧ ರಾಜ್ಯಗಳ ವೈದ್ಯಕೀಯ ಸಂಸ್ಥೆಗಳಲ್ಲಿ ಮತ್ತು ವೈದ್ಯಕೀಯ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡಿರುವರು. ಖ್ಯಾತ ವೈದ್ಯ ಡಾ.ಪಿ.ಎಸ್.ಶಂಕರ ಅವರ ಜೊತೆಗೂಡಿ Healthy Aging in Changing World ಹೆಸರಿನ ಪುಸ್ತಕವನ್ನು ಪ್ರಕಟಿಸಿರುವರು.
ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳು ಮತ್ತು ಹಿರಿಯ ನಾಗರಿಕರ ಜೀವನ ಸುಧಾರಣೆ ವಿಷಯದಲ್ಲಿನ ಡಾ.ಸಚಿನ್ ದೇಸಾಯಿ ಅವರ ಸಾಧನೆಯನ್ನು ಗುರುತಿಸಿ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಕಾರ್ಯಕಾರಿ ಸದಸ್ಯರನ್ನಾಗಿ ಮತ್ತು ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಕರ್ನಾಟಕ ಶಾಖೆಗೆ ಕಾರ್ಯದರ್ಶಿಯಾಗಿ ಆಯ್ಕೆಮಾಡಿದ್ದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಗೌರವಕ್ಕೆ ಭಾಜನರಾದ ಡಾ.ಸಚಿನ್ ದೇಸಾಯಿ  ಅವರನ್ನು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಮತ್ತು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಅಶೋಕ ಡೋರ್ಲೆ ಅಭಿನಂದಿಸಿರುವರು.

COMMENTS

WORDPRESS: 0
DISQUS: