ಸಂಘ ಪರಿವಾರದ ನೊಂದಣಿ ಏಕೆ ಬೇಕು : ವಿವೇಕಾನಂದ ಡಬ್ಬಿ ಪ್ರಶ್ನೆ

Homeಬ್ರೇಕಿಂಗ್ ನ್ಯೂಸ್

ಸಂಘ ಪರಿವಾರದ ನೊಂದಣಿ ಏಕೆ ಬೇಕು : ವಿವೇಕಾನಂದ ಡಬ್ಬಿ ಪ್ರಶ್ನೆ

ವಿಜಯಪುರ : ರಾಷ್ಟ್ರ ಹಿತರಕ್ಷಣೆ, ಸತ್ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿರುವ ಸಂಘ ಪರಿವಾರ ನೊಂದಣಿಯಾಗಲೇಬೇಕು ಎಂದೇನಿಲ್ಲ, ಸಂಘ ಪರಿವಾರದ ಹಿನ್ನೆಲೆಯ ಬಗ್ಗೆ ಗೃಹ ಸಚಿವರು ಮೊದಲು ಮು

ಅಂಗ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಿ :ಪ್ರಿಯಾಂಕಾ ಜಾರಕಿಹೊಳಿ
ಸಂಘ ಪರಿವಾರ ಕೆಣಕಿದವರು ಉಳಿದಿಲ್ಲ… ಜಿಗಜಿಣಗಿ ಮಾತು ಸತ್ಯ ಎಂದ ಗಣಿಹಾರ
ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ನಾಡಗೌಡ

ವಿಜಯಪುರ : ರಾಷ್ಟ್ರ ಹಿತರಕ್ಷಣೆ, ಸತ್ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿರುವ ಸಂಘ ಪರಿವಾರ ನೊಂದಣಿಯಾಗಲೇಬೇಕು ಎಂದೇನಿಲ್ಲ, ಸಂಘ ಪರಿವಾರದ ಹಿನ್ನೆಲೆಯ ಬಗ್ಗೆ ಗೃಹ ಸಚಿವರು ಮೊದಲು ಮುಖ್ಯಮಂತ್ರಿಗಳಿಗೆ ಕೇಳಲಿ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಪರಿವಾರದ ಸ್ವಯಂ ಸೇವಕರು ಪ್ರಕೃತಿ ವಿಕೋಪ ಬಂದಾಗಲೂ ಸಹಾಯಕ್ಕೆ ಧಾವಿಸುತ್ತಾರೆ, ರಾಜ್ಯದ ಹಾಲಿ ಮುಖ್ಯಮಂತ್ರಿಗಳೇ ಸಂಘವನ್ನು ಒಪ್ಪಿಕೊಂಡು, ಸದನದಲ್ಲಿಯೇ ನಮಸ್ತೆ ಸದಾ ವತ್ಸಲೇ ಎಂದು ಹಾಡಿದ್ದಾರೆ, ಸಂಘದ ಶಾಖೆಗಳಿಗೆ ಹೋಗಿರುವೆ ಎಂದು ಹೇಳಿದ್ದಾರೆ, ಮೊದಲು ಗೃಹ ಸಚಿವರು ಸಂಘದ ಬಗ್ಗೆ ಅವರಲ್ಲಿ ಕೇಳಿಕೊಳ್ಳಲಿ ಎಂದರು.

ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕ ಮಹಾನ್ ನಾಯಕರು ಸಂಘ ಪರಿವಾರದ ಶಾಖೆಗಳಿಗೆ ಭೇಟಿ ನೀಡಿದ್ದಾರೆ, ಉತ್ತಮ ಕಾರ್ಯ ಕೈಗೊಳ್ಳಲು ನೊಂದಣಿ ಏಕೆ ಬೇಕು ಎಂದು ಪ್ರಶ್ನಿಸಿದರು.

ಗಾಂಧಿಚೌಕ್ ನಲ್ಲಿ ವೇದಿಕೆ ಸಿದ್ದಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳ ಬಗ್ಗೆ ನಾವು ಹೇಳಲು ಸಿದ್ದ, ಗಾಂಧಿಚೌಕ್ ಬಳಿಯೇ ದೊಡ್ಡ ವೇದಿಕೆ ಹಾಕಿ, ಅಲ್ಲಿಯೇ ಬಂದು ನಾವು ಕೇಂದ್ರ ಸರ್ಕಾರದ ಸಾಧನೆ ಹೇಳಲು ಸಿದ್ದ ಎಂದು ವಿವೇಕಾನಂದ ಡಬ್ಬಿ ಆಹ್ವಾನ ನೀಡಿದರು.

ದೇಶದಲ್ಲಿ ರೂಪಿತಗೊಂಡಿರುವ ಹೆದ್ದಾರಿಗಳು, ಬೃಹತ್ ಉದ್ಯಮ ಸಂಸ್ಥೆಗಳು – ಕೈಗಾರಿಕೆಗಳ ಸ್ಥಾಪನೆ ಹೀಗೆ ಎಲ್ಲವನ್ನೂ ಕಾಂಗ್ರೆಸ್ ನಾಯಕರು ನೋಡಿ ದೇಶದ ಕಣ್ತುಂಬಿಕೊಳ್ಳಿ ಎಂದರು.

ಅದರೆ ಕಾಂಗ್ರೆಸ್ ನಾಯಕರು ವಿನಾಕಾರಣ ಸಂಘ ಪರಿವಾರ ಮೊದಲಾದ ವಿಷಯಗಳನ್ನು ಮುನ್ನೆಲೆಗೆ ತಂದು ಡೈವರ್ಟ್ ಮಾಡುವುದರಲ್ಲಿ ಮಾತ್ರ ನಿಪುಣರು ಎಂದರು.

೨೦೪೭ ರ ವಿಕಸಿತ ಭಾರತದ ಕಲ್ಪನೆಯ ಸಾಕಾರ ರೂಪದ ಹೆಜ್ಜೆಯಾಗಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಕಳೆದ ೧೨ ವರ್ಷಗಳಿಂದ ಮುನ್ನಡೆಯುತ್ತಿದೆ ಎಂದರು.

ಹಿಂದುಳಿದವರನ್ನು ಅಧಿಕಾರದಿಂದ ಕೆಳಗಿಳಿಸಿದ ಕಾಂಗ್ರೆಸ್
ಹಿಂದುಳಿದ ವರ್ಗಗಳ ಮುಖ್ಯಮಂತ್ರಿಯನ್ನು ಕೆಳಗಿಳಿಸಿ ಕಾಂಗ್ರೆಸ್ ಬೇರೆ ನಾಯಕನನ್ನು ಮುಖ್ಯಮಂತ್ರಿಯಾಗಿಸಿದೆ, ಇದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಬಗ್ಗೆ ತೋರುತ್ತಿರುವ ಧೋರಣೆ, ಆದರೆ ಇನ್ನೊಂದೆಡೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿದ್ದು ಬಿಜೆಪಿ.
ಮಡಿವಾಳ ಸಮಾಜದ ರಘು ಕೌಟಿಲ್ಯ, ಹಿಂದುಳಿದ ವರ್ಗಗಳ ಮಾ.ನಾಗರಾಜ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದೆ, ಮೈಕ್ರೋ ಕಮ್ಯೂನಿಟಿ ಎಂದು ಕರೆಯಿಸಿಕೊಳ್ಳುವ ವರ್ಗಗಳಿಗೂ ರಾಜಕೀಯ ಪ್ರಾತಿನಿಧ್ಯ ದೊರಕಿಸಿದ್ದು ಬಿಜೆಪಿ ಎಂದರು.

ಹಿಂದುಳಿದ ವರ್ಗಗಳ ನಾಯಕರೇ ಬಿಜೆಪಿ ಪಕ್ಷದ ಮುಂಚೂಣಿ ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಎಂದರು.

ಜಿ.ಪಂ. ಮಾಜಿ ಸದಸ್ಯ ಸಾಬು ಮಾಶ್ಯಾಳ, ಮುಖಂಡರಾದ ಈರಣ್ಣ ರಾವೂರ, ರಾಜಕುಮಾರ ಸಗಾಯಿ, ಮಂಜುನಾಥ ಮೀಸೆ, ವಿಜಯ ಜೋಶಿ ಮೊದಲಾದದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

COMMENTS

WORDPRESS: 0
DISQUS: