ಪಶು ವಿಜ್ಞಾನದಲ್ಲಿ ಗಂಗಾಧರ ಅಪೂರ್ವ ಸಾಧನೆ ಬರೆದ ಗಂಗಾಧರ

Homeಶಿಕ್ಷಣ

ಪಶು ವಿಜ್ಞಾನದಲ್ಲಿ ಗಂಗಾಧರ ಅಪೂರ್ವ ಸಾಧನೆ ಬರೆದ ಗಂಗಾಧರ

ವಿಜಯಪುರ : ಪ್ರತಿ ವರ್ಷವೂ ಒಂದಲ್ಲ ಸಾಧನೆಗೆ ಭಾಜನವಾಗುವ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ಈ ಬಾರಿಯೂ ಸಾಧನೆಯ ನಗೆ ಬೀರಿದ್ದಾರೆ. ಪಶುವಿಜ್ಞಾನ ವಿಭಾಗದಲ

ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು
2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ

ವಿಜಯಪುರ : ಪ್ರತಿ ವರ್ಷವೂ ಒಂದಲ್ಲ ಸಾಧನೆಗೆ ಭಾಜನವಾಗುವ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ಈ ಬಾರಿಯೂ ಸಾಧನೆಯ ನಗೆ ಬೀರಿದ್ದಾರೆ.

ಪಶುವಿಜ್ಞಾನ ವಿಭಾಗದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಗಂಗಾಧರ ಮುತ್ತಗಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಭಾಜನವಾಗುವ ಮೂಲಕ ಅನುಪಮ ಸಾಧನೆ ತೋರಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಗಂಗಾಧರ ಮುತ್ತಗಿ ೦.೫ ರ‍್ಯಾಂಕ್ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ ೩.೫ ರ‍್ಯಾಂಕ್ ಪಡೆದುಕೊಳ್ಳುವ ಸಾಧನೆ ತೋರಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡ ೨೦೨೫-೨೬ ನೇ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿತಾಂತ್ರಿಕ ದೋಷಗಳಿಂದಾಗಿ ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗದೇ ಉಳಿದಿದ್ದವು. ಅಂಥಹ ಸಂದರ್ಭದಲ್ಲಿ ಸ್ಪಾಟ್ರ‍್ಯಾಂಕಿಂಗ್‌ನ್ನು ನೀಡುವ ಪ್ರತೀತಿ ಕೆಇಎ ಅಳವಡಿಸಿಕೊಂಡಿದ್ದು ಅದರಆಧಾರದ ಮೇಲೆ ರ‍್ಯಾಂಕ್ ನೀಡಲಾಗಿದ್ದುಗಂಗಾಧರ ಮುತ್ತಗಿ ೦.೫ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲನೇ ರ‍್ಯಾಂಕ್‌ಗಿಂತಲೂ ಹೆಚ್ಚಿನ ರ‍್ಯಾಂಕ್‌ನ್ನು ಪಡೆದುಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ.

ಈ ವಿಷಯವನ್ನು ಹಂಚಿಕೊಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ ಮಾತನಾಡಿ, ಕಳೆದ ಬಾರಿಯೂ ಸಹ ಅತ್ಯುತ್ತಮ ಫಲಿತಾಂಶವನ್ನು ನೀಡಿಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜುಇಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದು ಸಂತಸ ತಂದಿದೆ ಎಂದರು.

ಸ್ಪಾಟ್ರ‍್ಯಾಂಕಿಂಗ್ ಮೂಲಕ ೦.೫ ರ‍್ಯಾಂಕ್ ಪಡೆದ ಈ ವಿದ್ಯಾರ್ಥಿಯು ವೆಟರ್‌ನರಿಯಲ್ಲಿರಾಜ್ಯಕ್ಕೆ ಮೊದಲ ಹಾಗೂ ೩.ರ‍್ಯಾಂಕ್ ಮೂಲಕ ಬಿಎಸ್‌ಸಿ ಅಗ್ರಿಯಲ್ಲಿರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬಡತನದಲ್ಲಿ ಅರಳಿದ ಪ್ರತಿಭೆಯಾಗಿ ಮಿಂಚಿದ್ದಾರೆ ಎಂದರು.

ಪ್ರಾಂಶುಪಾಲ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಪಾಲ್ಗೊಂಡಿದ್ದರು.

COMMENTS

WORDPRESS: 0
DISQUS: