ಫಲವತ್ತಾದ ಭೂಮಿ ಕೈಗಾರಿಕೆಗಳ ಸ್ವಾಧೀನ ಬೇಡ : ಜೆಡಿಎಸ್ ಮನವಿ

Homeಪ್ರಾದೇಶಿಕ

ಫಲವತ್ತಾದ ಭೂಮಿ ಕೈಗಾರಿಕೆಗಳ ಸ್ವಾಧೀನ ಬೇಡ : ಜೆಡಿಎಸ್ ಮನವಿ

ವಿಜಯಪುರ : ರೈತರ ಫಲವತ್ತಾದ ಜಮೀನುಗಳನ್ನು ಕೈಗಾರಿಕಾ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಅನೇಕ ರೈತಪರ ವಿಷಯಗಳನ್ನು ಮುಂದಿರಿಸಿಕೊಂಡು ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕ

ಪ್ರೊ. ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಇಂದು
ಆಸ್ಮಿತಾ ವುಮೆನ್ಸ್ ಸೈಕ್ಲಿಂಗ್ ಲೀಗ್‌ಗೆ ಸಂಸದ ಜಿಗಜಿಣಗಿ ಚಾಲನೆ
ಸಾಹಿತಿಗಳಿಗೆ ಉದ್ದಟತನ, ಸಿನಿಕತನ ಇರಬಾರದು: ಬರಗೂರು ರಾಮಚಂದ್ರಪ್ಪ

ವಿಜಯಪುರ : ರೈತರ ಫಲವತ್ತಾದ ಜಮೀನುಗಳನ್ನು ಕೈಗಾರಿಕಾ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಅನೇಕ ರೈತಪರ ವಿಷಯಗಳನ್ನು ಮುಂದಿರಿಸಿಕೊಂಡು ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ಬಲವಂತವಾಗಿ ವಶಪಡಿಸಿ ಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವುದು ಸರ್ಕಾರದ ರೈತ ವಿರೋಧಿ ನೀತಿಯ ಒಂದು ಉದಾಹರಣೆ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿರುವ ಬಡರೈತರ ಅತ್ಯಂತಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯದ ಪ್ರಸ್ತುತ ಕಾಂಗ್ರೆಸ ಸರ್ಕಾರವು ಹೊರಡಿಸಿರುವ ಅಂತಿಮಗೆ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ. ಪ್ರಸ್ತುತ ಸರ್ಕಾರವು ಜಾರಿಗೆ ತರುತ್ತಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್‌ನವರ ಕೈವಾಡ ಅಡಗಿದೆಯೇ ಎಂಬ ಆತಂಕ ಕಾಡುತ್ತಿದೆ ಎಂದರು.

ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಈ ಕರಾಳ ಅಂತಿಮ ಅಧಿಸೂಚನೆಯನ್ನು ತಕ್ಷಣವೇರದ್ದುಗೊಳಿಸಬೇಕು, ಮುಂದಿನ ತಿಂಗಳು ಜಾರಿಗೆತರಲು ಉದ್ದೇಶಿಸಿರುವ ೭,೫೦೦ಕ್ಕೂ ಹೆಚ್ಚುಎಕರೆ ಭೂಸ್ವಾಧೀನದ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು, ಸಾರ್ವಜನಿಕ ಆಸ್ತಿಗಳಾದ ಸಿ.ಎ ನಿವೇಶನಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲಪಡೆಯುತ್ತಿರುವ ಆರ್ಥಿಕ ದುರ್ನೀತಿಯನ್ನು ತಕ್ಷಣ ನಿಲ್ಲಿಸುವಂತೆ ಬೇಡಿಕೆಗಳನ್ನು ಮಂಡಿಸಲಾಯಿತು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಅಪ್ಪುಗೌಡ ಪಾಟೀಲ ಮನಗೂಳಿ ರಾಜು ಹಿಪ್ಪರಗಿ, ದಿಲಾವರ ಖಾಜಿ, ಹುಸೇನ ಬಾಗಾಯತ, ಎಸ್.ಎಸ್. ಖಾದ್ರಿ ಇನಾಮದಾರ, ಸಂಜು ಹಿರೇಮಠ, ವೀರಮ್ಮ ಚನ್ನಗಾಂವಿಶೆಟ್ಟಿ, ಮರೆಪ್ಪ ಗಿರಣಿಒಡ್ಡರ, ಕೌಸರ ಶೇಖ, ಬಿ.ಬಿ. ಪಾಟೀಲ, ಪ್ರಕಾಂತ ಕಿಣಗಿ, ಪೀರಪಾಶಾ ಗಚ್ಚಿಮಹಲ, ಸಂಜು, ಮನೋಜ ಬಿರಾದಾರ, ಮನ್ನಾನ್ ಶಾಬಾದಿ, ಜಗದೀಶ ಕೊಟ್ರಶೆಟ್ಟಿ, ಸಿಂದಗಿಯ ಸಿದ್ದನಗೌಡ ಪಾಟೀಲ, ಶಂಕರ ಹಾಲಳ್ಳಿ, ಬಾಬು ಶಿರಣಗಾರ, ಶಿವಾಜಿ ಶಿಂಗಾಡೆ, ಶಂಕರ ಹಾಲಳ್ಳಿ, ಜಲಾಲಸಾಬ, ಗುಂಡು ಪಾಟೀಲ, ಗೋಡಕೆ ಉಪಸ್ಥಿತರಿದ್ದರು.

COMMENTS

WORDPRESS: 0
DISQUS: